News Kannada
Friday, December 09 2022

ಕರ್ನಾಟಕ

`ರಾಷ್ಟ್ರೀಕರಣದಿಂದ ಖಾಸಗೀಕರಣದೆಡೆಗೆ ಮೋದಿ ಸರ್ಕಾರ’

Photo Credit :

`ರಾಷ್ಟ್ರೀಕರಣದಿಂದ ಖಾಸಗೀಕರಣದೆಡೆಗೆ ಮೋದಿ ಸರ್ಕಾರ'

ಮಡಿಕೇರಿ: ದೇಶವನ್ನು ಆಳಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು 20 ಅಂಶಗಳ ಕಾರ್ಯಕ್ರಮಗಳ ಮೂಲಕ ಬಡವರ, ಜನಸಾಮಾನ್ಯರ ಪರವಾದ ಆಡಳಿತವನ್ನು ನೀಡಿ ಬ್ಯಾಂಕ್ ಗಳನ್ನು ರಾಷ್ಟ್ರೀಕರಣಗೊಳಿಸಿದರು. ಆದರೆ ಈಗಿನ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ರಾಷ್ಟ್ರೀಕರಣದಿಂದ ಖಾಸಗೀಕರಣದೆಡೆಗೆ ಕೊಂಡೊಯ್ಯುತ್ತಿದ್ದಾರೆ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ಮುಖಂಡ ವಿಜಯ ಶಂಕರ್ ಟೀಕಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಂದಿರಾ ಗಾಂಧಿಯವರ ಸರ್ಕಾರ ಖಾಸಗೀಕರಣದಿಂದ ರಾಷ್ಟ್ರೀಕರಣದ ಕಡೆಗೆ ದೇಶವನ್ನು ಕೊಂಡೊಯ್ದಿದ್ದರು. ಆದರೆ ನರೇಂದ್ರ ಮೋದಿ ಅವರು ಲಾಭದಾಯಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಆರ್ಥಿಕ ತಜ್ಞರು ನೀಡಿರುವ ಮಾಹಿತಿ ಪ್ರಕಾರ ಶೇ.73 ರಷ್ಟು ಸಂಪತ್ತು ದೇಶದ ಒಂದೇ ಭಾಗದ ಜನರಲ್ಲಿ ಕ್ರೋಢೀಕರಣಗೊಳ್ಳುತ್ತಿದೆ. ಕೃಷಿಕರ ಬಳಿ ಶೇ.1 ರಷ್ಟು ಸಂಪತ್ತು ಕೂಡ ಕ್ರೋಢೀಕರಣಗೊಳ್ಳುತ್ತಿಲ್ಲ. ಸಾಮಾಜಿಕ ನ್ಯಾಯದ ಪರಿಕಲ್ಪನೆ ಇಲ್ಲದ ಕೇಂದ್ರ ಸರ್ಕಾರದಲ್ಲಿ ಶೇ.33ರಷ್ಟಿರುವ ಒಬಿಸಿ, ಶೇ.12 ರಷ್ಟಿರುವ ಮುಸಲ್ಮಾನರು, ಶೇ.3 ರಷ್ಟಿರುವ ಕ್ರೈಸ್ತರು, ಶೇ.3ರಷ್ಟಿರುವ ಪರಿಶಿಷ್ಟ ವರ್ಗ ಹಾಗೂ ಶೇ.17ರಷ್ಟಿರುವ ಲಿಂಗಾಯಿತರಿಗೆ ಕೇಂದ್ರ ಸರ್ಕಾರದಲ್ಲಿ ಯಾವುದೇ ಪ್ರಾತಿನಿಧ್ಯವನ್ನು ನೀಡಿಲ್ಲವೆಂದು ವಿಜಯಶಂಕರ್ ಟೀಕಿಸಿದರು.

ಭ್ರಷ್ಟಾಚಾರ, ಭಯೋತ್ಪಾದನೆ, ನಿರುದ್ಯೋಗ ಮುಕ್ತ ಭಾರತ ನಿರ್ಮಾಣ, ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರುವುದು, ಗೋ ಹತ್ಯೆಯನ್ನು ನಿಷೇಧಿಸುವುದು, ಲೋಕಪಾಲ ಮಸೂದೆಯನ್ನು ಜಾರಿಗೆ ತರುವುದು, ಗಂಗಾ ಕಾವೇರಿ ನದಿ ಜೋಡಣೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ನಿರಾಶ್ರಿತ ಕಾಶ್ಮೀರ ಪಂಡಿತರಿಗೆ ಪುನರ್ವಸತಿ ಕಲ್ಪಿಸುವುದು ಇವುಗಳು 2014 ರಲ್ಲಿ ಎನ್ಡಿ್ಎ ನೀಡಿದ್ದ ಭರವಸೆಗಳಾಗಿವೆ. ಇವುಗಳಲ್ಲಿ ಯಾವ ಭರವಸೆ ಈಡೇರಿದೆಯೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೆ ಬಹಿರಂಗ ಪಡಿಸಲಿ ಎಂದು ವಿಜಯ ಶಂಕರ್ ಸವಾಲು ಹಾಕಿದರು.

ದುರ್ಬಲ ಪ್ರಧಾನಿ
ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರೇ ಪ್ರಧಾನಿ ವಿರುದ್ಧ ತಿರುಗಿಬಿದ್ದಿದ್ದು, ಇಟ್ಟ ಭರವಸೆ ಕೊಟ್ಟ ಮಾತು ತಪ್ಪಿದ್ದಾರೆಂದು ಪ್ರತಿಭಟನೆ ನಡೆಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಯಾವುದೇ ಭರವಸೆಗಳನ್ನು ಈಡೇರಿಸದ ಅತ್ಯಂತ ದುರ್ಬಲ ಪ್ರಧಾನಿಯೊಬ್ಬರು ಈ ದೇಶವನ್ನು ಆಳುತ್ತಿದ್ದಾರೆಂದು ಅವರು ಆರೋಪಿಸಿದರು. ಕೋಟಿ ಕೋಟಿ ಸಾಲ ಮಾಡಿ ಬ್ಯಾಂಕ್ ಕೊಳ್ಳೆ ಹೊಡೆದವರು ದೇಶ ಬಿಟ್ಟು ಹೋಗುತ್ತಿದ್ದಾರೆ, ಇವರನ್ನು ತಡೆಯಲು ಸಾಧ್ಯವಾಗದ ದುರ್ಬಲ ಸರ್ಕಾರವಿಂದು ಕೇಂದ್ರದಲ್ಲಿದೆ. 2008ರಿಂದ 13ರವರೆಗೆ ರಾಜ್ಯದಲ್ಲಿದ್ದ ಬಿಜೆಪಿ ಆಡಳಿತದಲ್ಲಿ ಮುಖ್ಯಮಂತ್ರಿಯೇ ಜೈಲಿಗೆ ಹೋಗಿದ್ದಲ್ಲದೆ, ಹಲವು ಹಗರಣಗಳೊಂದಿಗೆ ಆಂತರಿಕ ಕಿತ್ತಾಟದಲ್ಲಿ ತೊಡಗಿದ ಸಾಧನೆಯಾಗಿದೆ. 2014ರಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ಅವರು ಸುಳ್ಳು ಭರವಸೆಗಳನ್ನೇ ನೀಡಿದ್ದಾರೆ. ಈ ಅಂಶಗಳನ್ನು ಜನರ ಮುಂದಿಟ್ಟುಕೊಂಡು ಬಿಜೆಪಿ ಮಂದಿ ಜನರ ಬಳಿ ಮತ ಕೇಳುತ್ತಾರೆಯೆ ಎಂದು ವಿಜಯ ಶಂಕರ್ ಪ್ರಶ್ನಿಸಿದರು.

See also  ಗುಂಡ್ಲುಪೇಟೆಯಲ್ಲಿ ರಾಜಕೀಯ ಜಟಾಪಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು