News Kannada
Thursday, December 08 2022

ಕರ್ನಾಟಕ

ಎರಡು ಕ್ಷೇತ್ರದಲ್ಲೂ ಹೆಚ್.ಡಿ.ಕೆ ಗೆಲುವು ಖಚಿತ ಎಂದ ದೇವೇಗೌಡ್ರು.!

Photo Credit :

ಎರಡು ಕ್ಷೇತ್ರದಲ್ಲೂ ಹೆಚ್.ಡಿ.ಕೆ ಗೆಲುವು ಖಚಿತ ಎಂದ ದೇವೇಗೌಡ್ರು.!

ರಾಮನಗರ: ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಎಚ್.ಡಿ.ಕುಮಾರಸ್ವಾಮಿ ಅವರು ಎರಡು ಕ್ಷೇತ್ರಗಳಲ್ಲಿ ಗೆದ್ದು ಬರುವುದು ಖಚಿತ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭವಿಷ್ಯ ನುಡಿದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ವಿರುದ್ಧ ರಾಮನಗರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಯಾರೇ ಸ್ಪರ್ಧಿಸಿದರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಚನ್ನಪಟ್ಟಣದಲ್ಲಿ ಪಕ್ಷದ ಸಂಘಟನೆ ಚೆನ್ನಾಗಿದೆ.

ಹೀಗಾಗಿ ಉಭಯ ಕ್ಷೇತ್ರಗಳಲ್ಲಿ ಗೆಲುವು ನಮ್ಮದೇ, ಹಿಂದೆ ಮಲ್ಯ, ಸುಬ್ರಹ್ಮಣ್ಯಸ್ವಾಮಿ, ಎಸ್.ಎಂ.ಕೃಷ್ಣ, ಅನಂತ ಕುಮಾರ್ ಎಲ್ಲರೂ ಒಂದಾಗಿ ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ನನ್ನ ವಿರುದ್ಧ ಡಿ.ಕೆ.ಶಿವಕುಮಾರ್ ಹಾಗೂ ಈಶ್ವರಪ್ಪನವರನ್ನು ಕಣಕ್ಕಿಳಿಸಿದ್ದರು. ಆ ದಿನಗಳಲ್ಲಿ ಸಿದ್ದರಾಮಯ್ಯ ಕೂಡ ನನ್ನ ಜತೆಗೇ ಇದ್ದರು, ಆಗ ನಾನು ಜಯ ಗಳಿಸಿರಲಿಲ್ಲವೇ? ಎಂದು ಪ್ರಶ್ನಿಸಿದರು.

ಅಂದಿನ ಚುನಾವಣೆಯಲ್ಲಿ ಸುಮಾರು 56 ಸಾವಿರ ಮತಗಳ ಅಂತರದಿಂದ ನಾನು ಜಯಗಳಿಸಿದ್ದೆ. ಉತ್ತರಹಳ್ಳಿ ಹೊರತುಪಡಿಸಿ ಕನಕಪುರ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟ ಎಲ್ಲಾ ಮತ ಕ್ಷೇತ್ರಗಳಲ್ಲೂ ನನಗೆ ಬಹುಮತ ಬಂದಿತ್ತು. ಕಾಂಗ್ರೆಸ್ ಮಾತ್ರವಲ್ಲದೆ, ಜೆ.ಡಿ.ಎಸ್.ನಲ್ಲಿಯೂ ಎಚ್.ವಿಶ್ವನಾಥ್, ಬಂಡಪ್ಪ ಕಾಶಂಪುರ್ ಸೇರಿದಂತೆ ಅನೇಕ ಅಹಿಂದ ನಾಯಕರಿದ್ದಾರೆ.

ಚನ್ನಪಟ್ಟಣದಲ್ಲಿಯೂ ಅಹಿಂದ ನಾಯಕರು ಇದ್ದಾರೆ. ನಾವು ಯಾರಿಗೂ ದ್ರೋಹ ಮಾಡಿಲ್ಲ. ಹೀಗಾಗಿ ಎಚ್.ಎಂ.ರೇವಣ್ಣ ಆದಿಯಾಗಿ ಯಾರೇ ಸ್ಪರ್ಧಿಸಿದರೂ ನಮಗೆ ಚಿಂತೆಯಿಲ್ಲ, ಚನ್ನಪಟ್ಟಣದ ಸ್ವಾಭಿಮಾನಿ ಮತದಾರರು ನಮ್ಮ ಕೈಹಿಡಿಯುವರು, ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚನ್ನಪಟ್ಟಣದಲ್ಲಿ ಅನಿತಾ ಕುಮಾರಸ್ವಾಮಿಯವರನ್ನೇ ಕಣಕ್ಕಿಳಿಸುವಂತೆ ಕಾರ್ಯಕರ್ತರು ಹಾಗೂ ಮುಖಂಡರು ಒತ್ತಡ ಹೇರಿದ್ದರು. ಆದರೆ ನಮ್ಮ ಕುಟುಂಬದಿಂದ ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್.ಡಿ.ರೇವಣ್ಣ ಹೊರತುಪಡಿಸಿ ಬೇರಾರೂ ಸ್ಪರ್ಧೆ ಮಾಡುವುದಿಲ್ಲ ಎನ್ನುವ ನಿರ್ಧಾರ ಪಕ್ಷದಲ್ಲಿ ಮಾಡಿಯಾಗಿದೆ.

ಹೀಗಾಗಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಹಿತದೃಷ್ಠಿಯಿಂದ ಎರಡೂ ಕ್ಷೇತ್ರಗಳಲ್ಲಿಯೂ ಕುಮಾರಸ್ವಾಮಿಯವರ ಸ್ಪರ್ಧೆಗೆ ತೀರ್ಮಾನಿಸಲಾಗಿದೆ ಎಂದು ಇದೇ ವೇಳೆ ಹೇಳಿದರು.

See also  ಮಳೆಹಾನಿ ಸಂತ್ರಸ್ತರಿಗೆ ಪುನರ್ ವಸತಿ : ಸಿಎಂ ಜತೆ ಚರ್ಚಿಸುವುದಾಗಿ ವಿಶ್ವನಾಥ್ ಭರವಸೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು