News Kannada
Thursday, December 08 2022

ಕರ್ನಾಟಕ

ಕತುವಾ ಅತ್ಯಾಚಾರ ಪ್ರಕರಣ: ಕಾಸರಗೋಡಿನಲ್ಲಿ ಅಘೋಷಿತ ಪ್ರತಿಭಟನೆ

Photo Credit :

ಕತುವಾ ಅತ್ಯಾಚಾರ ಪ್ರಕರಣ: ಕಾಸರಗೋಡಿನಲ್ಲಿ ಅಘೋಷಿತ ಪ್ರತಿಭಟನೆ

ಕಾಸರಗೋಡು: ಜಮ್ಮು-ಕಾಶ್ಮೀರದ ಕತುವಾದಲ್ಲಿ 8 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆಗೈದ ಕೃತ್ಯವನ್ನು ಖಂಡಿಸಿ, ಕೇರಳದಲ್ಲಿ ಅಘೋಷಿತ ಹರತಾಳ ನಡೆಯುತ್ತಿದ್ದು, ಕಾಸರಗೋಡಿನಲ್ಲಿ ಬಸ್ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಜನಪರ ಸಮಿತಿ ಹೆಸರಿನಲ್ಲಿ ಹರತಾಳ ನಡೆಯುತ್ತಿದೆ. ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳ ಮೂಲಕ ಪ್ರಚಾರ ಹಾಗೂ ಸಂದೇಶ ರವಾನಿಸಿ ಹರತಾಳಕ್ಕೆ ಕರೆ ನೀಡಿದ್ದು , ಜನರಲ್ಲೂ ಗೊಂದಲ ಸೃಷ್ಟಿ ಮಾಡಿದೆ.

ಇಂದು ಬೆಳಗ್ಗೆಯಿಂದಲೇ ಬಸ್ಸು ಸೇರಿದಂತೆ ವಾಹನಗಳು ರಸ್ತೆಗಿಳಿದಿಲ್ಲ. ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಹಲವೆಡೆ ಟಯರ್, ಕಲ್ಲು, ಮರದ ತುಂಡುಗಳನ್ನಿಟ್ಟು ರಸ್ತೆ ತಡೆ ನಡೆಸಲಾಗಿದೆ.

ಉಪ್ಪಳದಲ್ಲಿ ನಿನ್ನೆ ರಾತ್ರಿ ಕೆ.ಎಸ್.ಆರ್.ಟಿ.ಸಿ ಬಸ್ಸೊಂದಕ್ಕೆ ಕಲ್ಲೆಸೆಯಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರ, ನಾಯಮ್ಮಾರಮೂಲೆ, ಎರಿಯಾಲ್, ಚೆರ್ಕಳ ಮೊದಲಾದೆಡೆ ವಾಹನಗಳನ್ನು ತಡೆದ ಘಟನೆ ನಡೆದಿದೆ.

ಈ ನಡುವೆ ವಾಹನಗಳನ್ನು ತಡೆಯಲೆತ್ನಿಸಿದ 25 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಲವು ಬೈಕ್ ಮತ್ತು ಆಟೋಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆದಿತ್ಯವಾರ ಸಂಜೆಯಿಂದಲೇ ನಾಳೆ ಕೇರಳ ಬಂದ್ ಎಂಬ ಸಂದೇಶ ಎಲ್ಲೆಡೆ ಹರಿದಾಡುತ್ತಿತ್ತು.

ಯಾವುದೇ ಸಂಘಟನೆ, ಪಕ್ಷವನ್ನು ಉಲ್ಲೇಖಿಸದೆ ಈ ಸಂದೇಶ ರವಾನೆಯಾಗುತ್ತಿತ್ತು. ಆದರೆ ಪೊಲೀಸರು ಇದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಇಂದು ಬೆಳಗ್ಗೆಯಿಂದ ಸಂಪೂರ್ಣ ಬಂದ್ ವಾತಾವರಣ ಹಾಗೂ ಹಲವೆಡೆ ವಾಹನಗಳನ್ನು ತಡೆದಾಗ ಪೊಲೀಸರು ಎಚ್ಚರಗೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.

See also  ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು