News Kannada
Thursday, December 01 2022

ಕರ್ನಾಟಕ

ಸರ್ಕಾರಿ ನೌಕರರ ಅಕ್ರಮ ಆಸ್ತಿ ಬಗ್ಗೆ ಎಸಿಬಿಗೆ ಮಾಹಿತಿ ಕೊಡಲು ಡಿವೈಎಸ್ಪಿ ಮನವಿ

Photo Credit :

ಸರ್ಕಾರಿ ನೌಕರರ ಅಕ್ರಮ ಆಸ್ತಿ ಬಗ್ಗೆ ಎಸಿಬಿಗೆ  ಮಾಹಿತಿ  ಕೊಡಲು ಡಿವೈಎಸ್ಪಿ ಮನವಿ

ಸೋಮವಾರಪೇಟೆ: ಸರ್ಕಾರಿ ನೌಕರ ಲಂಚ ಪಡೆಯುವುದು ಹಾಗು ನೌಕರನ ಅಕ್ರಮ ಆಸ್ತಿ ಗಳಿಕೆಯ ಬಗ್ಗೆ ಸೂಕ್ತ ಮಾಹಿತಿಯಿದ್ದವರು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಲಿಖಿತ ಅಥವಾ ಮೌಖಿಕ ದೂರು ಸಲ್ಲಿಸಬಹುದು ಎಂದು ಎಸಿಬಿ ಡಿವೈಎಸ್ಪಿ ಎಚ್.ಎಂ. ಶೈಲೇಂದ್ರ ಹೇಳಿದರು.

ಇಲ್ಲಿನ ಪ್ರತಿಕಾಭವನದಲ್ಲಿ ಎಸಿಬಿ ವತಿಯಿಂದ ನಡೆದ ಭ್ರಷಾಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರು ಸ್ವೀಕರಿಸುವ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಯಾವುದೆ ಸರ್ಕಾರಿ ನೌಕರ ತನ್ನ ದಿನನಿತ್ಯದ ಕೆಲಸಗಳನ್ನು ನಿರ್ವಹಿಸಲು ಅನಗತ್ಯ ವಿಳಂಬ ಮಾಡಿದ್ದಲ್ಲಿ, ನಿರ್ಲಕ್ಷ್ಯತೆ ತೋರಿದಲ್ಲಿ, ಸಾರ್ವಜನಿಕರು ಎಸಿಬಿಗೆ ದೂರು ಸಲ್ಲಿಸಬಹುದು ಎಂದು ಹೇಳಿದರು.

ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಜಾಸ್ತಿಯಾಗಿರುವ ಬಗ್ಗೆ ದೂರುಗಳು ಹೆಚ್ಚಾಗಿದ್ದು, ಇದು ಲಂಚದ ಹಾವಳಿ ಹೆಚ್ಚಾಗಲು ಕಾರಣವಾಗಿದೆ. ಮೇಲಾಧಿಕಾರಿಗಳು ಮಧ್ಯವರ್ತಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಹೀಗೆ ಮುಂದುವರಿದೆ ಅಧಿಕಾರಿಗಳು ಜವಾಬ್ದಾರರಾಗಬೇಕಾಗುತ್ತದೆ ಎಂದು ಹೇಳಿದರು.

ಕಚೇರಿಗೆ ಹಾಜರಾಗುವ ಸಂದರ್ಭ ಅಧಿಕಾರಿಗಳು ಹಾಗು ನೌಕರರು ಹಣದೊಂದಿಗೆ ಕರ್ತವ್ಯಕ್ಕೆ ಹಾಜರಾಗಬಾರದು. ಹಣವಿದ್ದರೆ ಮುಂಚಿತವಾಗಿಯೇ ಸಕಾರಣ ಕೊಟ್ಟು ಡೈರಿಯಲ್ಲಿ ದಾಖಲಿಸಬೇಕು ಎಂದು ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ನೌಕರರು ಅಧಿಕಾರಿಗಳ ಹೆಸರು ಹೇಳಿಕೊಂಡು ಲಂಚ ಸ್ವೀಕರಿಸಿರುವುದು ಸಾಬೀತಾದರೆ, ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು. ಅಧಿಕಾರಿಗಳು ಕೈಕೆಳಗಿನ ನೌಕರರನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎಂದರು.

ಸರ್ಕಾರಿ ನೌಕರರಿಗೆ ಸರ್ಕಾರ ಸಂಬಳ ಕೊಡುವುದು ಸಾರ್ವಜನಿಕರ ಕೆಲಸವನ್ನು ನಿಗದಿತ ಸಮಯದಲ್ಲಿ ಮಾಡಿಕೊಡಲು. ಆದರೆ ಸಾರ್ವಜನಿಕರನ್ನು ಲಂಚಕೋಸ್ಕರ ಸತಾಯಿಸಿವುದು ಮಾಮೂಲಿಯಾಗಿದೆ. ಇದು ಅಕ್ಷಮ್ಯ ಅಪರಾಧವಾಗಿದೆ. ಕಾನೂನು ಬಲಿಷ್ಠವಾಗಿದ್ದು, ಲಂಚಕೋರರು ಪ್ರತಿಸಲ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ನಂತರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಸಭೆಯಲ್ಲಿ ತಹಸೀಲ್ದಾರ್ ವೀರೇಂದ್ರ ಬಾಡಕರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ಚಿಟ್ಟಿಯಪ್ಪ, ಎಸಿಬಿ ಇನ್ಸ್ ಪೆಕ್ಟರ್ ಗಳಾದ ಎಂ.ಮಹೇಶ್, ಎಂ.ದೊಡ್ಡೇಗೌಡ, ಇದ್ದರು.

See also  `ಮಕ್ಕಳಿಗೆ ಪ್ರಾತ್ಯಕ್ಷಿಕೆ ಮೂಲಕ ಕೃಷಿಯ ಬಗ್ಗೆ ಮಾಹಿತಿಯ ಅಗತ್ಯವಿದೆ'
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು