News Kannada
Wednesday, December 07 2022

ಕರ್ನಾಟಕ

ಜೀವನದಿ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನಕ್ಕೆ ಆಗ್ರಹ

Photo Credit :

ಜೀವನದಿ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನಕ್ಕೆ ಆಗ್ರಹ

ಮಡಿಕೇರಿ: ಜೀವನದಿ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನ(ಲಿವಿಂಗ್ ಎಂಟಿಟಿ ವಿದ್ ಲೀಗಲ್ ಪರ್ಸನ್ ಸ್ಟಟಸ್)ಕ್ಕಾಗಿ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್(ಸಿಎನ್ಸಿ) ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ವಾಹನ ಜಾಥಾ ಮೇ 24ರಂದು ತಲಕಾವೇರಿಯಿಂದ ಆರಂಭವಾಗಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಎಲ್ಲಾ ನಾಗರಿಕತೆ ಮತ್ತು ಸಂಸ್ಕೃತಿಗೆ ನದಿಗಳೇ ಮೂಲವಾಗಿದ್ದು, ಕಾವೇರಿ ನದಿ ಮಹರ್ಷಿ ಅಗಸ್ತ್ಯರನ್ನು ವಿಶ್ವ ದಾರ್ಶನಿಕರನ್ನಾಗಿಸಿತು. ಕ್ರೋಢ ದೇಶ (ಕೊಡಗು ದೇಶ)ವನ್ನು ಜನಪದವನ್ನಾಗಿಸಿತು. ಆ ಮೂಲಕ ವಿಶ್ವದ ನಾಗರಿಕತೆ ಉಗಮಕ್ಕೆ ದಾರಿಯಾಗುವುದರ ಮೂಲಕ ಕೊಡವ ಬುಡಕಟ್ಟು ಕ್ಷಾತ್ರಕುಲದ ಉತ್ಪತ್ತಿಗೆ ನಾಂದಿಯಾಯಿತು. ಸೃಷ್ಟಿ, ನೀರು ಜೀವನಕ್ಕೆ ಅವಿನಾಭಾವ ನಂಟಿದ್ದು, ಇಂದು ಅಂತಹ ಪುಣ್ಯನದಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದು, ಅದನ್ನು ಸಂರಕ್ಷಿಸಬೇಕಾದರೆ ಅಸಾಧಾರಣವಾದ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪ್ರತಿಪಾದಿಸಿದರು.

ಭಾರತೀಯರಿಗೆ ನದಿಗಳು ಕೇವಲ ನದಿಗಳಲ್ಲ. ಅವು ಅವರ ಮನೋಭೂಮಿಕೆಯಲ್ಲಿ ಮನುಷ್ಯ ರೂಪದಲ್ಲಿ ಸಾಕಾರಗೊಳ್ಳುವ ದೇವತೆಗಳಾಗಿದ್ದು, ಭಾರತೀಯ ನ್ಯಾಯ ಶಾಸ್ತ್ರದ ಪ್ರಕಾರ ಹಿಂದೂ ದೇವತೆಗಳು ‘ಲೀಗಲ್ ಪರ್ಸನಲ್’ಗಳಾಗಿವೆ. ಲೀಗಲ್ ಪರ್ಸನ್ ಅಂದರೆ ಹಕ್ಕು ಮತ್ತು ಕರ್ತವ್ಯಗಳನ್ನು ಹೊಂದಿರುವ ವ್ಯಕ್ತಿ ಎಂದರ್ಥವಾಗಿದ್ದು, ಅದರಂತೆ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನ ದೊರೆತಲ್ಲಿ ಕೊಡಗಿಗೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದಾಗಿದೆ ಎಂದರು.

ಜೀವನದಿ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯನ್ನು 2017ರ ಮಾರ್ಚ್ ನಲ್ಲೇ ಸಂಘಟನೆ ವಿಶ್ವಸಂಸ್ಥೆಯ ನದಿ ನೀರು ಹಂಚಿಕೆ ನ್ಯಾಯಮಂಡಳಿಯಿಂದ ಹಿಡಿದು ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಗೃಹಸಚಿವರು ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ಜ್ಞಾಪನಾಪತ್ರ ರವಾನಿಸಿದ್ದು, ಇದೀಗ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕಾವೇರಿಯ ಉಗಮಸ್ಥಾನವಾದ ತಲಕಾವೇರಿಯಿಂದ ಸಮುದ್ರ ಸೇರುವ ಪೂಂಪ್ಹಾರ್ವರೆಗೆ ವಾಹನ ಜಾಥಾ ಆಯೋಜಿಸಲಾಗಿದೆ ಎಂದು ನಾಚಪ್ಪ ಮಾಹಿತಿ ನೀಡಿದರು.

ಪ್ರತಿದಿನ 200ಕಿ.ಮೀ ಜಾಥ
ಮೇ 24ರಂದು ತಲಕಾವೇರಿಯಲ್ಲಿ ಆರಂಭವಾಗಲಿರುವ ಜಾಥಾ ಜಲಾನಯನ ಪ್ರದೇಶದ ಜಿಲ್ಲೆಗಳಾದ ಕೊಡಗು, ಮೈಸೂರು, ಮಂಡ್ಯ, ಧರ್ಮಪುರಿ, ಸೇಲಂ, ಈರೋಡ್, ತಿರುಚರಾಪಳ್ಳಿ, ತಂಜಾವೂರು, ಶ್ರೀರಂಗಂ ಮೂಲಕ ಹಾದು ಅಂತಿಮವಾಗಿ ಕಾವೇರಿ ಮತ್ತು ಬಂಗಾಳಕೊಲ್ಲಿ ಸಂಗಮಿಸುವ ಪೂಂಪುಹಾರ್ ನಲ್ಲಿ ಸಮಾರೋಪಗೊಳ್ಳಲಿದೆ. ಕಾವೇರಿ ನದಿ ಹರಿಯುವ ಜಿಲ್ಲೆಗಳಲ್ಲಿ ಪ್ರತಿನಿತ್ಯ 200ಕಿ.ಮೀ ಜಾಥಾ ಸಂಚರಿಸಲಿದ್ದು, ಅಲ್ಲಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸುವ ಮೂಲಕ ಹಾಗೂ ಪುರಾತನ ದೇವಾಲಯಗಳಲ್ಲಿ ತಂಗುವ ಮೂಲಕ ಕಾವೇರಿ ಜಲಾನಯನ ಪ್ರದೇಶದ ಜನರಲ್ಲಿ ಧರ್ಮಪ್ರಜ್ಞೆ ಜಾಗೃತಿಗೊಳಿಸುವುದರೊಂದಿಗೆ ಕಾವೇರಿಯ ಮಹತ್ವವನ್ನು ತಿಳಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಮೂಕೊಂಡ ದಿಲೀಪ್, ಚೆಂಬಂಡ ಜನತ್, ಅರೆಯಡ ಗಿರೀಶ್ ಹಾಗೂ ಮಂದಪಂಡ ಮನೋಜ್ ಉಪಸ್ಥಿತರಿದ್ದರು.

See also  ವಿಧಾನಸೌಧದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ: ಸಿಎಂ ಚಾಲನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು