News Kannada
Tuesday, November 29 2022

ಕರ್ನಾಟಕ

ಟಿಪ್ಪರ್ ಡಿಕ್ಕಿ ಹೊಡೆದು ಮಹಿಳೆ ಸಾವು - 1 min read

Photo Credit :

ಟಿಪ್ಪರ್ ಡಿಕ್ಕಿ ಹೊಡೆದು ಮಹಿಳೆ ಸಾವು

ಕಾಸರಗೋಡು: ಬದಿಯಡ್ಕ ನೆಲ್ಲಿಕಟ್ಟೆಯಲ್ಲಿ ರಸ್ತೆ ಬದಿ ನಿಗೂಢವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿದ್ದಾಗಿ ಖಚಿತ ಪಡಿಸಲಾಗಿದೆ ಚಾಲಕನನ್ನು ವಶಕ್ಕೆ ತೆಗೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ನೆಲ್ಲಿಕಟ್ಟೆಯ ಝುಹಾರ(48) ಮೃತಪಟ್ಟವರು. ಸೋಮವಾರ ನೆಲ್ಲಿಕಟ್ಟೆ ಚರ್ಲಡ್ಕದ ರಸ್ತೆ ಬದಿ ಗಂಭೀರ ಗಾಯಗೊಂಡು ಬಿದ್ದಿರುವುದನ್ನು ಗಮನಿಸಿದ ನಾಗರಿಕರು ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಮೃತಪಟ್ಟಿದ್ದರು.

ದೇಹದ ಮೇಲೆ ಗಾಯಗಳು ಕಂಡು ಬಂದಿದ್ದವು. ಕೊಲೆ ಎಂಬ ಸಂಶಯ ಆರಂಭದಲ್ಲಿ ಉಂಟಾಗಿತ್ತು. ಬಳಿಕ ಘಟನಾ ಸ್ಥಳಕ್ಕೆ ತಲಪಿ ಬದಿಯಡ್ಕ ಠಾಣಾ ಪೊಲೀಸರು ಪರಿಶೀಲನೆ ನಡೆಸಿದಾಗ ಸ್ಥಳದಲ್ಲಿ ಟಿಪ್ಪರ್ ಲಾರಿಯ ಬಲ್ಬ್ ಹುಡಿಯಾಗಿ ಬಿದ್ದಿರುವುದು ಕಂಡು ಬಂದಿತ್ತು. ಇದರಿಂದ ಲಾರಿಯ ಪತ್ತೆ ಗಾಗಿ ಪೊಲೀಸರು ಶೋಧ ನಡೆಸಿದ್ದರು.
ಈ ನಡುವೆ ಎಡನೀರಿನಲ್ಲಿ ಬುಧವಾರ ಬಲ್ಬ್ ಹುಡಿಯಾದ ಹಿನ್ನೆಲೆಯಲ್ಲಿ ಸ್ಟಿಕ್ಕರ್ ಲಗತ್ತಿಸಿರುವುದು ಕಂಡು ಬಂತು. ಚಾಲಕನನ್ನು ಕರೆಸಿ ವಿಚಾರಿಸಿದಾಗ ಘಟನೆ ನಡೆದಿರುವುದು ಬೆಳಕಿಗೆ ಬಂದಿತು.

ಸೋಮವಾರ ಮುಂಜಾನೆ ಚೆರ್ಕಳದಿಂದ ವಿಟ್ಲಕ್ಕೆ ಜಲ್ಲಿ ಕಲ್ಲುಗಳನ್ನು ಕೊಂಡೊಯುತ್ತಿದ್ದಾಗ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಝುಹಾರ ರಿಗೆ ಡಿಕ್ಕಿ ಹೊಡೆದಿತ್ತು.

See also  ಕಿಡಿಗೇಡಿಗಳ ಕೃತ್ಯಕ್ಕೆ ಬಂಡೀಪುರ-ಬಿ.ಆರ್.ಹಿಲ್ಸ್ ಅರಣ್ಯ ನಾಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು