News Kannada
Friday, December 02 2022

ಕರ್ನಾಟಕ

ಲೋಕಸಭೆಯಲ್ಲಿ ಪ್ರಧಾನಿ ಎದ್ದು ನಿಲ್ಲಲು ಭಯಪಡುತ್ತಾರೆ: ರಾಹುಲ್ ಗಾಂಧಿ

Photo Credit :

ಲೋಕಸಭೆಯಲ್ಲಿ ಪ್ರಧಾನಿ ಎದ್ದು ನಿಲ್ಲಲು ಭಯಪಡುತ್ತಾರೆ: ರಾಹುಲ್ ಗಾಂಧಿ

ಮಡಿಕೇರಿ: ಬಸವಣ್ಣ ಅವರು ನುಡಿದಂತೆ ನಡೆ ಎಂದಿದ್ದರು, ಆದರೆ ಬಸವಣ್ಣನವರಿಗೆ ನಮಿಸುವ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ನುಡಿದಂತೆ ನಡೆದಿಲ್ಲವೆಂದು, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಗೋಣಿಕೊಪ್ಪದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು, ದಸರಾ ಮೈದಾನದಲ್ಲಿ ಮಾತನಾಡಿದ ಅವರು, ಬಸವಣ್ಣನವರು ನುಡಿದಂತೆ ನಡೆ ಎಂದಿದ್ದರು, ಅವರಿಗೆ ನಮಿಸುವ ಮೋದಿ ನುಡಿದಂತೆ ನಡೆದಿಲ್ಲ. ಕಳೆದ ಲೋಕಸಭಾ ಚುನಾವಣೆ ಸಂದರ್ಭ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಭರವಸೆ ನೀಡಿದ್ದರು. ಆದರೆ ಯಾರಿಗೂ ಏನೂ ಸಿಗಲಿಲ್ಲವೆಂದು ಆರೋಪಿಸಿದರು.

ನೋಟ್ ಬ್ಯಾನ್ ಪ್ರಯೋಗ ಮಾಡುವ ಮೂಲಕ ಜನಸಾಮಾನ್ಯರನ್ನು ಪ್ರಧಾನಿ ಸಂಕಷ್ಟಕ್ಕೆ ಸಿಲುಕಿಸಿದರು. ಅವರ ಸೂಟ್ ಬೂಟ್ ಸ್ನೇಹಿತರು ಬ್ಲಾಕ್ ಮನಿಯನ್ನು ವೈಟ್ ಮಾಡಿಕೊಂಡರು. ಬಡವರು ಕಷ್ಟ ಕಾಲಕ್ಕಾಗಿ ಇಟ್ಟಿದ್ದ ಹಣವನ್ನು ಸೂಟ್ ಬೂಟ್ ಸ್ನೇಹಿತರಿಗೆ ನೀಡಿದರು.

ನೀರವ್ ಮೋದಿಯಂತವರು ಬಡವರ ಹಣ ಗುಳುಂ ಮಾಡಿದರು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರಾಹುಲ್ ಗಾಂಧಿ ‘ನುಡಿದಂತೆ ನಡೆ’ ಮೋದೀಜೀ ಎಂದು ಸಭೆಯ ಗಮನ ಸೆಳೆದರು.

ಎಲ್ಲಿ ಭ್ರಷ್ಟಾಚಾರದ ವಿಚಾರಗಳು ಚರ್ಚೆಯಾಗುತ್ತವೆ ಎಂದು ಲೋಕಸಭೆಯಲ್ಲಿ ಎದ್ದು ನಿಲ್ಲಲು ಕೂಡ ಪ್ರಧಾನಿ ಹೆದರುತ್ತಾರೆ. ಇದೇ ಮೊದಲ ಬಾರಿಗೆ ಸರ್ಕಾರವೇ ಸಂಸತ್ ಅಧಿವೇಶನವನ್ನು ಮೊಟಕುಗೊಳಿಸಿದೆ. ತಮ್ಮ ಸ್ನೇಹಿತರ ಹಗರಣಗಳ ಬಗ್ಗೆ ಚರ್ಚೆಯಾಗುತ್ತದೆ ಎನ್ನುವ ಭಯದಿಂದ ಪ್ರಧಾನಿ ಹೀಗೆ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

ಮೋದಿ ಜೀ ಅವರೇ ಸಿದ್ಧರಾಮಯ್ಯ ಅವರನ್ನು ನೋಡಿ ಕಲಿಯಿರಿ, ಸಿದ್ಧರಾಮಯ್ಯ ನುಡಿದಂತೆ ನಡೆದಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ‘ಬೇಟಿ ಬಚಾವೋ ಬೇಟಿ ಪಡಾವೋ’ ಅಂತಾರೆ, ಆದರೆ ಯು.ಪಿ.ಯಲ್ಲಿ ಬಿಜೆಪಿ ಶಾಸಕರೇ ಅತ್ಯಾಚಾರ ಮಾಡ್ತಾರೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಬಿಜೆಪಿಯವರಿಂದ ಭೇಟಿ ಬಚಾವೋ ಸಾಧ್ಯವಿಲ್ಲವೆಂದು ಟೀಕಿಸಿದರು. ಚಿಲ್ಲರೆ ಅಂಗಡಿಯವರನ್ನೂ ಬಿಡದೆ ಎಲ್ಲರಿಂದಲೂ ಕೇಂದ್ರ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡಿ ಪ್ರಧಾನಿ ಮೋದಿ ಬಾಯಿ ಬಡಾಯಿಯಾಯಿತೇ ಹೊರತು ಸಾಧನೆ ಶೂನ್ಯ ಎಂದು ವ್ಯಂಗ್ಯವಾಡಿದರು. ನಮ್ಮ ಸರ್ಕಾರದ ಮೇಲೆ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ, ನಿಮಗೆ ತಾಕತ್ ಇದ್ದರೆ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬನ್ನಿ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದೆ. ಆದರೆ ಅವರ್ಯಾರಿಗೂ ಬರಲು ಧಮ್ ಇಲ್ಲ ಎಂದು ಸಿಎಂ ವಾಗ್ಧಾಳಿ ನಡೆಸಿದರು.

ವಿಯೆಟ್ನಾಂ ಕಾಳು ಮೆಣಸು ಹಗರಣಕ್ಕೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮಗ ಎಂದು ಆರೋಪಿಸಿದ ಸಿದ್ದರಾಮಯ್ಯ, ಮೋದಿಯದ್ದು ಬರೀ ಮನ್ ಕೀ ಬಾತ್, ಕಾಮ್ ಕೀ ಬಾತ್ ನ ಹೀ ಎಂದು ಲೇವಡಿ ಮಾಡಿದರು.

See also  ಅತಿವೃಷ್ಟಿ ಹಾನಿ ಕೊಡಗಿಗೆ ಅನುದಾನ : ಕೇಂದ್ರ ಗೃಹ ಸಚಿವರಿಗೆ ಮನವಿ

ಈ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಸ್ಪೀಕರ್ ಆಗಿದ್ದಾಗ ಯಡಿಯೂರಪ್ಪ ಅವರ ಸರ್ಕಾರವನ್ನು ಉಳಿಸುವ ಕಾರ್ಯ ಮಾಡಿದರೇ, ಹೊರತು ಬೇರೆ ಯಾವ ಸಾಧನೆಯನ್ನೂ ಮಾಡಿಲ್ಲವೆಂದು ಸಿದ್ಧರಾಮಯ್ಯ ಆರೋಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು