News Kannada
Tuesday, November 29 2022

ಕರ್ನಾಟಕ

ಚಾಮರಾಜನಗರದಲ್ಲಿ ಕುಟುಂಬದೊಂದಿಗೆ ವಾಟಾಳ್ ಮತಯಾಚನೆ - 1 min read

Photo Credit :

ಚಾಮರಾಜನಗರದಲ್ಲಿ ಕುಟುಂಬದೊಂದಿಗೆ ವಾಟಾಳ್ ಮತಯಾಚನೆ

ಚಾಮರಾಜನಗರ: ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್ ನಾಗರಾಜ್ ಅವರು ಚಾಮರಾಜನಗರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದು, ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಅಬ್ಬರದ ಪ್ರಚಾರದ ನಡುವೆಯೂ ತಮ್ಮದೇ ಆದ ರೀತಿಯಲ್ಲಿ ಪ್ರಚಾರವನ್ನು ನಡೆಸುತ್ತಿದ್ದಾರೆ.

ಇವರೊಂದಿಗೆ ಪ್ರಚಾರ ಮಾಡಲು ಪ್ರಭಾವಿ ನಾಯಕರಾಗಲೀ, ಕನ್ನಡದ ಹೋರಾಟಗಾರರಾಗಲೀ ಯಾರು ಇಲ್ಲವಾದರೂ ಇವರಿಗೆ ಪುತ್ರಿ ಅನುಪಮಾ ಹಾಗೂ ಮೊಮ್ಮಗ ಚಂದನ್ ಅವರು ಸಾಥ್ ನೀಡುತ್ತಿದ್ದಾರೆ. ಕೆಲವೆಡೆ ಪುತ್ರ ಮಹದೇವಪ್ರಸಾದ್ ಸಾಥ್ ನೀಡುತ್ತಿದ್ದಾರೆ.

ತನ್ನ ಕುಟುಂಬದ ಸದಸ್ಯರೊಂದಿಗೆ ಕ್ಷೇತ್ರದ ಹಳ್ಳಿ ಹಳ್ಳಿಗಳಿಗೆ ತೆರಳುತ್ತಿರುವ ವಾಟಾಳ್ ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಹರಿಹಾಯುತ್ತಿದ್ದಾರೆ. ಚಾಮರಾಜನಗರ ಅಭಿವೃದ್ಧಿಗಾಗಿ ಮತನೀಡಿ ಎಂದು ಮನವಿ ಮಾಡುತ್ತಿದ್ದಾರೆ.

ಈಗಾಗಲೇ ಕ್ಷೇತ್ರದಾದ್ಯಂತ ಹೆಚ್ಚಿನ ಹಳ್ಳಿಗಳನ್ನು ಸುತ್ತಾಡಿರುವ ವಾಟಾಳ್ ಮನೆಮನೆಗೆ ತೆರಳಿ ಮತ ಕೇಳುತ್ತಿದ್ದಾರೆ. ಇವರ ಭಾಷಣ ಕೇಳಲು ಒಂದಷ್ಟು ಮಂದಿ ಸೇರುತ್ತಿದ್ದಾರೆ. ಇಡೀ ಕರ್ನಾಟಕದಾದ್ಯಂತ ತನ್ನದೇ ಆದ ವ್ಯಕ್ತಿತ್ವದಿಂದ ಗುರುತಿಸಿಕೊಂಡಿರುವ ವಾಟಾಳ್ ಹಿಂದೊಮ್ಮೆ ಚಾಮರಾಜನಗರದಲ್ಲಿ ಸ್ಪರ್ಧಿಸಿ ಗೆಲುವು ಪಡೆದಿದ್ದರು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಅವರು ಯಾವುದೇ ಪಕ್ಷದಿಂದ ಸ್ಪರ್ಧಿಸಿದ್ದರೂ ಗೆಲುವು ಮಾತ್ರ ಅವರಿಗೆ ಒಲಿದಿಲ್ಲ.

ಈ ಬಾರಿ ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಅವರು ಹಗಲು ರಾತ್ರಿ ಎನ್ನದೆ ಮಗ, ಮಗಳು, ಮೊಮ್ಮಗನೊಂದಿಗೆ ಪ್ರಚಾರ ನಡೆಸುತ್ತಿದ್ದು, ಮತದಾರರು ಅವರಿಗೆ ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಹುಲ್ಲೆಪುರ, ಮಂಗಲಹೊಸೂರು, ಮಂಗಲ, ಮಸಗಾಪುರ, ಕಾಡಹಳ್ಳಿ, ಜಾಲಹಳ್ಳಿಹುಂಡಿ, ದೊಡ್ಡರಾಯಪೇಟೆ, ಕೂಡ್ಲೂರು, ಬೂದಿತಿಟ್ಟು, ಹಂಡರಕಳ್ಳಿ, ಮಾದಪುರ ಗ್ರಾಮಗಳಲ್ಲಿ ತೆರದ ವಾಹನದಲ್ಲಿ ಮತಯಾಚನೆ ಮಾಡಿದರು.

ಮತಯಾಚನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ಚುನಾವಣೆಯಲ್ಲಿ ಒಳ್ಳೆಯದಕ್ಕಿಂತ ಹೆಚ್ಚಾಗಿ ಅಪ ಪ್ರಚಾರ ಮಾಡುವವರು ಜಾಸ್ತಿ ಇದ್ದಾರೆ. ಅವರಿವರ ಮಾತಿಗೆ ಬೆಲೆ ಕೊಡದೆ ನನ್ನನ್ನು ನಂಬಿ ಬೆಂಬಲಿಸಿ. ನಾನು ಚಾ.ನಗರದಲ್ಲಿ ಗೆದ್ದರೆ ನಾಡಿನ ಸಮಸ್ತ ಆರೂವರೆ ಕೋಟಿ ಕನ್ನಡಿಗರ ಗೆಲುವು. ಚಾ.ನಗರಕ್ಕೆ ಶಕ್ತಿ ಬರುತ್ತದೆ, ಗೌರವ ಬರುತ್ತದೆ.

ಶಾಸನ ಸಭೆಗೆ ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಚುನಾವಣೆಗೆ ಸ್ಪರ್ಧಿಸಿ ಬರುತ್ತಿದ್ದಾರೆ. ತಮಿಳರು ಗೆದ್ದು ಬರುತ್ತಾರೆ. ಅಚ್ಚ ಕನ್ನಡಿಗನಾದ ನನ್ನನ್ನು ಚಾ.ನಗರದ ಜನತೆ ಶಾಸನ ಸಭೆಗೆ ಕಳುಹಿಸಿಕೊಡಿ. ಕ್ಷೇತ್ರದ ಜನತೆ ಮೊದಲಿನಿಂದಲೂ ನನ್ನ ಮೇಲೆ ಅಪಾರ ಪ್ರೀತಿ, ವಿಶ್ವಾಸ, ಅಭಿಮಾನ ಇಟ್ಟು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದೀರಿ. ಈ ಬಾರಿಯೂ ಸಹ ನನಗೆ ಮತ ಹಾಕುವುದರ ಮೂಲಕ ಶಾಸನ ಸಭೆಗೆ ಕಳುಹಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.

 

See also  ಸೆ.26 ರಂದು ಮಡಿಕೇರಿ ಜನೋತ್ಸವದ 'ಮಕ್ಕಳ ದಸರಾ' ಸಂಭ್ರಮ: ಮಕ್ಕಳ ಸಂತೆ-ಮಂಟಪ ಸ್ಪರ್ಧೆ ಆಕರ್ಷಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು