News Kannada
Sunday, November 27 2022

ಕರ್ನಾಟಕ

ವಾಸ್ತು ದೋಷ ನೆಪದಲ್ಲಿ ಚಿನ್ನಾಭರಣ ದೋಚುತ್ತಿದ್ದವರು ಅರೆಸ್ಟ್ - 1 min read

Photo Credit :

ವಾಸ್ತು ದೋಷ ನೆಪದಲ್ಲಿ ಚಿನ್ನಾಭರಣ ದೋಚುತ್ತಿದ್ದವರು ಅರೆಸ್ಟ್

ಮಾಗಡಿ: ವಾಸ್ತು ದೋಷವಿದೆ ಎಂದು ಹೇಳಿ ಮನೆಯೊಳಗೆ ನುಗ್ಗಿ ಪೂಜೆ ಮಾಡಿ ದೋಷ ಪರಿಹಾರ ಮಾಡುವುದಾಗಿ ನಂಬಿಸಿ ಚಿನ್ನಾಭರಣ, ನಗದು ದೋಚುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.

ಹೆಚ್.ಪ್ರಕಾಶ್ ರಾವ್(34) ಮತ್ತು ಯಲ್ಲಪ್ಪ (26) ಬಂಧಿತರಾಗಿದ್ದಾರೆ. ಇವರಿಬ್ಬರು ತಾಲೂಕಿನ ಮಾಯನಾಯಕನಹಳ್ಳಿಯಲ್ಲಿ ನಿವಾಸಿ ಜಯಮ್ಮ ಎಂಬುವವರಿಗೆ ನಿಮ್ಮ ಮನೆಯಲ್ಲಿ ವಾಸ್ತು ದೋಷವಿದ್ದು, ಪೂಜೆ ಮಾಡಬೇಕೆಂದು ನಂಬಿಸಿ 11 ಗ್ರಾಂ ಚಿನ್ನದ ಒಡವೆ, 23 ಸಾವಿರ ಹಣವನ್ನು ಹೊತ್ತೊಯ್ದಿದ್ದರು. ಕೊನೆಗೂ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇವರು ಇನ್ನೆಷ್ಟು ಜನರಿಗೆ ವಂಚಿಸಿದ್ದಾರೋ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.

ಬೆಂಗಳೂರಿನ ಸುಂಕದಕಟ್ಟೆಯ ಹೆಚ್.ಪ್ರಕಾಶ್ ರಾವ್ ಜೋತಿಷ್ಯ ಕೆಲಸ ಮಾಡುತ್ತಿದ್ದು, ಸೊಲ್ಲಾಪುರ ಬಡಾವಣೆ ಯಗ್ಗನಹಳ್ಳಿಯಲ್ಲಿ ವಾಸವಾಗಿದ್ದನು. ಇನ್ನೊಬ್ಬ ಯಲ್ಲಪ್ಪ ಜೋತಿಷ್ಯ ಕೆಲಸ ಮಾಡುತ್ತಿದ್ದು ಸುಂಕದಕಟ್ಟೆ ನಿವಾಸಿಯಾಗಿದ್ದಾನೆ.

ಇವರಿಬ್ಬರು ಮಾರ್ಚ್ 21 ರಂದು ಕೃಷ್ಣರಾವ್ ಶಾಸ್ತ್ರಿ ಯಲ್ಲಾಪುರದ ಮಯಾನಾಯಕನಹಳ್ಳಿ ನಿವಾಸಿ ಜಯಮ್ಮ ಎಂಬುವವರ ಬಳಿ ತೆರಳಿ ನಿಮ್ಮ ಮನೆಯಲ್ಲಿ ವಾಸ್ತು ದೋಷವಿದೆ ಪೂಜೆ ಮಾಡಬೇಕೆಂದು ನಂಬಿಸಿ ತಾಮ್ರದ ತಂಬಿಗೆಯಲ್ಲಿ 11 ಗ್ರಾಂ ಚಿನ್ನದ ಒಡವೆಗಳನ್ನು ಹಾಕಿಸಿ ನವಧಾನ್ಯಗಳನ್ನು ಹಾಕಿ ಗಂಜಲ ತರುವಂತೆ ಕಳುಹಿಸಿ ಅದರಲ್ಲಿದ್ದ ಚಿನ್ನದ ಒಡವೆಗಳನ್ನು ಲಪಟಾಯಿಸಿ ಪೂಜೆಗೆಂದು 23 ಸಾವಿರ ತೆಗೆದು ಮೋಸ ಮಾಡಿದ್ದರು.

ಈ ಸಂಬಂಧ ನೀಡಿದ ದೂರಿನ ಮೇರೆಗೆ ಜಿಲ್ಲಾ ಎಸ್ಪಿ ರಮೇಶ್ ಹಾಗೂ ಮಾಗಡಿ ಉಪವಿಭಾಗ ಪೊಲೀಸ್ ಉಪಾಧೀಕ್ಷರಾದ ಪುರುಷೋತ್ತಮ್ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಶಬರೀಷ್ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಆರೋಪಿಗಳಿಂದ 11 ಗ್ರಾಂ ಚಿನ್ನಾಭರಣ 18 ಸಾವಿರ ನಗದು ವಶ ಪಡಿಸಿಕೊಂಡಿದ್ದು ಆರೋಪಿಗಳನ್ನು ಮಾಗಡಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

See also  ಗ್ರಾಮಸ್ಥರ ವಿರೋಧಕ್ಕೂ ಜಗ್ಗದ ಶುಂಠಿ ಕೃಷಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು