News Kannada
Monday, October 03 2022

ಕರ್ನಾಟಕ

ವೇದ ಶಿಬಿರದಲ್ಲಿ ಮೂಡಿತು ಹಾವಿನ ಕುರಿತು ಜಾಗೃತಿ - 1 min read

Photo Credit :

 ವೇದ ಶಿಬಿರದಲ್ಲಿ ಮೂಡಿತು ಹಾವಿನ ಕುರಿತು ಜಾಗೃತಿ

ಸುಳ್ಯ: ಸುಳ್ಯದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ಬೇಸಿಗೆ ರಜೆಯಲ್ಲಿ ನಡೆಯುತ್ತಿರುವ ವೇದ ಶಿಬಿರದಲ್ಲಿ ವಿಶೇಷ ಆಕರ್ಷಣೆಯಾಗಿ ಶಿಬಿರಾರ್ಥಿಗಳಿಗೆ ಜೈವಿಕ ಪರಿಸರ ಸಂರಕ್ಷಣೆಯ ಕುರಿತಾದ ‘ಹಾವು-ನಾವು-ಪರಿಸರ’ ಅನ್ನುವ ವಿಶೇಷ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಾಗಾರ ನಡೆಸಲಾಯಿತು. ಖ್ಯಾತ ಉರಗತಜ್ಞ ಹಾಗು ವಿಷ ಚಿಕಿತ್ಸಾ ತಜ್ಞ ಪುತ್ತೂರಿನ ಡಾ. ರವೀಂದ್ರನಾಥ ಐತಾಳ ಈ ಕಾರ್ಯಾಗಾರ ನಡೆಸಿಕೊಟ್ಟರು.

`ಹಾವುಗಳು ಪರಿಸರ ಸ್ನೇಹಿಯಾಗಿರುವ ಜೀವಿಗಳಾಗಿದ್ದು, ಕೃಷಿಭೂಮಿ ಹಾಗೂ ಪರಿಸರ ಸಮತೋಲನ ಕಾಪಾಡುವಲ್ಲಿ ಇದರಿಂದ ಬಹಳಷ್ಟು ಪ್ರಯೋಜನವಿದೆ. ಯಾವುದೇ ವಿಷಕಾರಿ ಹಾವುಗಳು ಕೂಡಾ ತಮ್ಮ ಪ್ರಾಣಕ್ಕೆ ಅಪಾಯ ಉಂಟಾದ ಸಂದರ್ಭದಲ್ಲಿ ಮಾತ್ರವೇ ಮನುಷ್ಯನಿಗೆ ಕಚ್ಚುತ್ತದೆಯೇ ಹೊರತು, ಅದರಿಂದ ಯಾವ ಅಪಾಯವೂ ಇರುವುದಿಲ್ಲ.

ಹಾವುಗಳ ಕುರಿತಾಗಿ ವ್ಯರ್ಥ ಭಯವನ್ನು ಬಿಟ್ಟು ಉರಗ ಸಂಕುಲವನ್ನು ಪ್ರೀತಿಸಿ, ಉಳಿಸಿ ಬೆಳೆಸುವಲ್ಲಿ ಮುಂದಿನ ಪೀಳಿಗೆಯವರು ಕಾಳಜಿ ವಹಿಸಬೇಕು ಎಂದು ಹೇಳಿದರು. ಪ್ರಾತ್ಯಕ್ಷಿಕೆಯ ಸಂದರ್ಭದಲ್ಲಿ ತಂದಿದ್ದ ಹಾವುಗಳನ್ನು ಕೈಯಲ್ಲಿ ಹಿಡಿದು ಆನಂದಿಸಿದ ಮಕ್ಕಳು ಜೈವಿಕ ಪರಿಸರಕ್ಕೆ ಯಾವುದೇ ಹಾನಿಯನ್ನು ಉಂಟು ಮಾಡದೆ ಅವುಗಳನ್ನು ಉಳಿಸಿ ಬೆಳೆಸುವುದಾಗಿ ಸಂಕಲ್ಪ ಕೈಗೊಂಡರು.

ಈ ಕಾರ್ಯಾಗಾರದ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ಬ್ರಹ್ಮಶ್ರೀ ವೇ. ಮೂ. ಪುರೋಹಿತ ನಾಗರಾಜ ಭಟ್ ಹಾಗೂ ಶಿಬಿರದ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

See also  ಬೆಂಕಿಯಲ್ಲಿ ಬೆಂದಿದ್ದ ಬಂಡೀಪುರವನ್ನು ತಂಪಾಗಿಸಿದ ವರುಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು