News Kannada
Sunday, September 25 2022

ಕರ್ನಾಟಕ

ಗೂಡ್ಸ್ ಆಟೋಗೆ ಲಾರಿ ಡಿಕ್ಕಿ: ಪಾದಚಾರಿ ಸಾವು - 1 min read

Photo Credit :

ಗೂಡ್ಸ್ ಆಟೋಗೆ ಲಾರಿ ಡಿಕ್ಕಿ: ಪಾದಚಾರಿ ಸಾವು

ಗುಂಡ್ಲುಪೇಟೆ: ತಾಲೂಕಿನ ನಂಜನಗೂಡು ಗಡಿಯಲ್ಲಿ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಗೂಡ್ಸ್ ಆಟೋದ ಹಿಂಭಾಗದಲ್ಲಿ ಪ್ರಯಾಣಿಸುತ್ತಿದ್ದ ಕಾರ್ಮಿಕನೊಬ್ಬ ಸ್ಥಳದಲ್ಲಿಯೇ ಸಾವಿಗೀಡಾಗಿರುವ ಘಟನೆ ನಡೆದಿದೆ.

ನಂಜನಗೂಡಿನಿಂದ ಪಟ್ಟಣದತ್ತ ಬರುತ್ತಿದ್ದ ತರಕಾರಿ ತುಂಬಿದ ಗೂಡ್ಸ್ ಆಟೋ ಹಿರೀಕಾಟಿ ಸಮೀಪ ಸಾಗುವಾಗ ಹಿಂಬದಿಯಿಂದ ಬರುತ್ತಿದ್ದ ಕೇರಳ ಮೂಲದ ಲಾರಿ ಡಿಕ್ಕಿಹೊಡೆದು ಆಟೋ ಹಿಂಬದಿಯಲ್ಲಿ ಕುಳಿತಿದ್ದ ನಂಜನಗೂಡು ತಾಲೂಕಿನ ಹೊಸೂರು ಗ್ರಾಮದ ಕಾರ್ಮಿಕ ಕೆಳಗೆ ಬಿದ್ದಿದ್ದಾನೆ. ವೇಗವಾಗಿ ಸಾಗುತ್ತಿದ್ದ ಲಾರಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.

ಈ ಸ್ಥಳವು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರಿದ್ದು ಬಹಳ ಹೊತ್ತು ರಸ್ತೆಯ ನಡುವೆ ಕಾರ್ಮಿಕನ ಶವ ಬಿದ್ದಿದ್ದರಿಂದ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಸ್ಥಳಕ್ಕೆ ಧಾವಿಸಿದ ಬೇಗೂರು ಠಾಣೆಯ ಎಎಸ್ಐ ದೊರೆರಾಜು ಶವವನ್ನು ನಂಜನಗೂಡು ಆಸ್ಪತ್ರೆ ಶವಾಗಾರಕ್ಕೆ ಕಳುಹಿಸಿದ್ದಾರೆ.

See also  ಸಂತೇಕೊಪ್ಪಲು ಗ್ರಾಮದ ತುಂಬಿದ ಕಲ್ಯಾಣಿ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು