News Kannada
Friday, October 07 2022

ಕರ್ನಾಟಕ

ನಿಂತಿದ್ದ ಲಾರಿಗೆ ಬಸ್ ಡಿಕ್ಕಿ, 8 ಜನ ಸಾವು, 16 ಮಂದಿಗೆ ಗಾಯ - 1 min read

Photo Credit :

ನಿಂತಿದ್ದ ಲಾರಿಗೆ ಬಸ್ ಡಿಕ್ಕಿ, 8 ಜನ ಸಾವು, 16 ಮಂದಿಗೆ ಗಾಯ

ತುಮಕೂರು: ನಿಂತಿದ್ದ ಲಾರಿಗೆ ಯಾತ್ರಿಗಳಿದ್ದ ಖಾಸಗಿ ಬದ್ ಡಿಕ್ಕಿ ಹೊಡೆದ ಪರಿಣಾಮ 8 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಶಿರಾ ನಗರದಿಂದ ಮೂರು ಕಿ.ಮೀ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ 48 ರ ಜೈ ಹಿಂದ್ ಡಾಬಾ ಬಳಿ ನಡೆದಿದೆ. ಅಪಘಾತದ ತೀವ್ರತೆಗೆ ಬಸ್ ನಜ್ಜುಗುಜ್ಜಾಗಿದೆ. 16ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆದ್ದಾರಿ ಎಡ ಭಾಗದಲ್ಲಿ ನಿಂತಿದ್ದ ಲಾರಿಗೆ ಇಂಡಿಕೇಟರ್ ಹಾಕಿರಲಿಲ್ಲ. ಅತೀ ವೇಗದಲ್ಲಿ ಬಂದ ಹನುಮಾನ್ ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಬಸ್ ಇದಕ್ಕೆ ಡಿಕ್ಕಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯ ಸವಿತಾ ಸೋಮಶೇಖರ್(21), ಅನುಷಾ(7), ರತ್ನಮ್ಮ ಕುಮಾರ್ (39), ಸುಮಲತಾ ಲಿಂಗರಾಜು(21), ಗಿರಿಜಮ್ಮ ದೇವರಾಜು(55), ಶಿರಾ ಜ್ಯೋತಿನಗರದ ಶಂಕರ್ ಈಶ್ವರಪ್ಪ(38) ,ಅಶ್ವತ್ಥ್ ನಾರಾಯಣ (40) ಎಂದು ಗುರುತಿಸಲಾಗಿದೆ. ಬಸ್ ನಲ್ಲಿದ್ದವರು ಸಿಗಂಧೂರಿನ ಚೌಡೇಶ್ವರಿ ದೇವಸ್ಥಾನಕ್ಕೆ ಮೇ 19ರಂದು ತೆರಳಿದ್ದು ಮೇ 20 ರಂದು ರಾತ್ರಿ ಹಿಂದಿರುಗಿ ಬರುತ್ತಿದ್ದರು.

ಘಟನೆಯಲ್ಲಿ ಭೂತಣ್ಣ, ರಂಗಪ್ಪ, ಶಾಂತಮ್ಮ, ಭಾರತಿ,ಯಶೋಧರ, ಅನ್ನಪೂಣೇ೯ಶ್ವರಿ, ಜ್ಯೋ, ವೀರಭದ್ರಯ್ಯ, ನಂಜಮ್ಮ, ದ್ಮಮ್ಮ, ಕೆಂಚಮ್ಮ, ಅಜೇಯ, ತಿಪ್ಪೇಸ್ವಾಮಿ, ನಾಗಮಣಿ,ರಂಗನಾಥ, ಸೋಮಶೇಖರ್ ಗಾಯಗೊಂಡಿದ್ದಾರೆ.

See also  ಪರಿಸರ ಸಂರಕ್ಷಣೆಯಲ್ಲಿ 'ಟೀಂ ನರಿಕೊಡವರೈಡರ್ಸ್ಗ್ರೂಪ್'
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು