News Kannada
Saturday, October 01 2022

ಕರ್ನಾಟಕ

ಕರಡಿಗಳ ಕಾದಾಟಕ್ಕೆ ಬಲಿಯಾಯಿತೇ ಮರಿ ಕರಡಿಗಳು? - 1 min read

Photo Credit :

ಕರಡಿಗಳ ಕಾದಾಟಕ್ಕೆ ಬಲಿಯಾಯಿತೇ ಮರಿ ಕರಡಿಗಳು?

ತುಮಕೂರು: ದೊಡ್ಡ ಕರಡಿಗಳ ಕಾದಾಟಕ್ಕೆ ಎರಡು ಮರಿಕರಡಿಗಳು ಸಾವನ್ನಪ್ಪಿರುವ ಘಟನೆ ಪಾವಗಡ ತಾಲೂಕಿನ ಸೂಲನಾಯಕನ ಹಳ್ಳಿ ಗ್ರಾಮದ ಬಳಿ ನಡೆದಿದೆ.

ಈ ಮರಿಕರಡಿಗಳೆರಡು ಕಾದಾಡಿ ಸಾವನ್ನಪ್ಪಿರ ಬಹುದೆಂದು ಸಂಶಯ ವ್ಯಕ್ತಪಡಿಸಲಾಗಿದೆ. ಕೆ.ರಾಮಪುರ ಹಾಗೂ ಸೂಲನಾಯಕನ ಹಳ್ಳಿ ರಸ್ತೆಯ ಸಮೀಪದಲ್ಲಿ ಬೆಟ್ಟವಿದ್ದು ಇಲ್ಲಿ ಕರಡಿ ಚಿರತೆ ಸೇರಿದಂತೆ ಹಲವು ಪ್ರಾಣಿಗಳ ಆವಾಸ ಸ್ಥಾನವಾಗಿದೆ.

ಕರಡಿಗಳು ಹೆಚ್ಚಿರುವ ಕಾರಣ ಕಾದಾಟ ನಡೆಸಿರಬಹುದೆಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದು, ದೊಡ್ಡ ಕರಡಿಗಳು ಕಾದಾಟ ನಡೆಸಿದ ಸಂದರ್ಭ ಅವುಗಳ ನಡುವೆ ಸಿಲುಕಿ ಎರಡು ಮರಿಕರಡಿಗಳು ಸಾವನ್ನಪ್ಪಿವೆ ಎನ್ನಲಾಗುತ್ತಿದೆ.

ಬೆಟ್ಟದ ರಸ್ತೆ ಬಳಿ ಮರಿಗಳು ಸಾವನ್ನಪ್ಪಿದ್ದನ್ನು ಕಂಡು ಅದರ ಬಳಿ ತೆರಳಿದ ತಾಯಿ ಕರಡಿ ಚೀರಾಡಿದೆ. ಕರಡಿ ಚೀರಾಡುವ ಸದ್ದು ಕೇಳಿದ ಸ್ಥಳೀಯ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ನೋಡಿದಾಗ ಕರಡಿ ಮರಿಗಳೆರಡು ಸಾವನ್ನಪ್ಪಿರುವುದು ಕಂಡು ಬಂದಿದೆ.

ಈ ಬೆಟ್ಟದ ವ್ಯಾಪ್ತಿಯ ಕಾಡು ಪ್ರಾಣಿಗಳ ನಡುವೆ ಕಾದಾಟ ಮಾಮೂಲಿಯಾಗಿದ್ದು, ಇದೀಗ ದೊಡ್ಡ ಕರಡಿಗಳ ಕಾದಾಟಕ್ಕೆ ಸಣ್ಣ ಮರಿಗಳು ಸಾವನ್ನಪ್ಪಿವೆ. ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ

See also  ಐದು ತಿಂಗಳ ಮಗುವಿಗೆ ಗುಣವಾಯಿತು ಕೊರೊನಾ ಜೊತೆಗೆ ಮೂರ್ಛೆ ರೋಗ: ಕಿಮ್ಸ್ ವೈದ್ಯರ ಸಾಧನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು