News Kannada
Tuesday, October 04 2022

ಕರ್ನಾಟಕ

ಮಂಡ್ಯದಲ್ಲಿ ಮಾವು ಪ್ರಿಯರ ಸೆಳೆಯುತ್ತಿರುವ ಮಾವು ಮೇಳ - 1 min read

Photo Credit :

ಮಂಡ್ಯದಲ್ಲಿ ಮಾವು ಪ್ರಿಯರ ಸೆಳೆಯುತ್ತಿರುವ ಮಾವು ಮೇಳ

ಮಂಡ್ಯ: ತೋಟಗಾರಿಕೆ ಇಲಾಖೆ, ಮಂಡ್ಯ ಜಿಲ್ಲಾ ಪಂಚಾಯತ್ , ಜಿಲ್ಲಾ ತೋಟಗಾರಿಕೆ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದಲ್ಲಿ 3 ದಿನಗಳ ಕಾಲ ಹಮ್ಮಿಕೊಂಡಿರುವ ಮಾವು ಮೇಳ ಮಾವು ಪ್ರಿಯರ ಗಮನಸೆಳೆಯುತ್ತಿದೆ. ವಿವಿಧ ತರಾವರಿಯ ಹಣ್ಣುಗಳು ಇಲ್ಲಿದ್ದು ಜನ ಮುಗಿಬಿದ್ದು ತಮಗೆ ಬೇಕಾಗಿರುವುದನ್ನು ಖರೀದಿಸುತ್ತಿದ್ದಾರೆ.

ಮಾವು ಮೇಳಕ್ಕೆ ಮಂಡ್ಯ ಜಿಲ್ಲಾಧಿಕಾರಿ ಎನ್. ಮಂಜುಶ್ರೀ ಅವರು ಚಾಲನೆ ನೀಡಿ, ಮಾತನಾಡಿದ ಅವರು, ನಮ್ಮ ರಾಜ್ಯಗಳ ವಿವಿಧ ಜಿಲ್ಲೆಗಳ ಮಾವು ತಳಿಗಳ ಜೊತೆಯಲ್ಲಿ ಬೇರೆ ರಾಜ್ಯದ ಮಾವುಗಳನ್ನು ಕೂಡ ಈ ಮೇಳದಲ್ಲಿ ಕಾಣಬಹುದಾಗಿದೆ. ಸೀಜನಲ್ ಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡುವುದರ ಮೂಲಕ ಮಾವು ಬೆಳಗಾರರಿಗೆ ನೆರವಾಗಬೇಕು ಎಂದು ಹೇಳಿದರು.

ನಿಫಾ ವೈರಸ್ ಬಗ್ಗೆ ಎಲ್ಲ ರೀತಿಯ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಅತಂಕವಿಲ್ಲದೆ ಜನತೆ ಮಾವು ಸೇವನೆ ಮಾಡಬಹುದಾಗಿದೆ. ಕೃತಕವಾಗಿ ಮಾವುಗಳನ್ನು ಮಾಗಿಸದೆ ಮಾವುಗಳನ್ನು ನೈಸಗರ್ಿಕವಾಗಿ ಮಾಗಿಸಲಾಗಿದ್ದು ಕೃತಕವಾಗಿ ಮಾಗಿಸಿ ಮಾರಾಟ ಮಾಡುವವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು. ನಿಫಾ ವೈರಸ್ ರೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಗೊಂದಲ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಆರೋಗ್ಯ ಇಲಾಖೆ ಮತ್ತು ಪಶು ಇಲಾಖೆಗಳ ಜೊತೆ ಸಭೆ ನಡೆಸಿ ಸಾರ್ವಜನಿಕರಿಗೆ ಅರಿವು ಮೂಡಿಸಲು ಸೂಚನೆ ನೀಡಲಾಗಿದ್ದು, ಗ್ರಾಮ ಪಂಚಾಯಿತಿ ಮಟ್ಟಗಳಲ್ಲಿ ನಿಫಾ ವೈರಸ್ ರೋಗದ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು

ಮಾವು ಮೇಳದಲ್ಲಿ 18 ಮಾವಿನ ಮಳಿಗೆಗಳನ್ನು ತೆರೆಯಲಾಗಿದ್ದು, ಒಟ್ಟು 73 ವಿವಿಧ ತಳಿಯ ಮಾವಿನ ಹಣ್ಣು ಆಂಧ್ರ ಪ್ರದೇಶದ ರಾಜ್ಯದ 10 ಮಾವಿನ ತಳಿ, ಬೆಳಗಾವಿ ಜಿಲ್ಲೆಯ 30 ತಳಿಗಳನ್ನೊಳಗೊಂಡ ಮಾವಿನ ಹಣ್ಣುಗಳು ಎಲ್ಲರ ಬಾಯಲ್ಲಿ ನೀರೂರಿಸುತ್ತಿದೆ

See also  ಕುಮಟಾ: ಮನೆಯಲ್ಲಿ ಯಾರೋ ಇಲ್ಲದ  ವೇಳೆ ಕದೀಮರ ಕೈಚಳಕ  
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು