News Kannada
Thursday, September 29 2022

ಕರ್ನಾಟಕ

ಚಿನ್ನ, ನಗದು ದೋಚಿದ ಮನೆಯೊಡೆಯನ ಸಾಕು ಮಗಳು: ಪೊಲೀಸರ ಬಲೆಗೆ ಬಿದ್ದ ಚೋರಿ - 1 min read

Photo Credit :

ಚಿನ್ನ, ನಗದು ದೋಚಿದ ಮನೆಯೊಡೆಯನ ಸಾಕು ಮಗಳು: ಪೊಲೀಸರ ಬಲೆಗೆ ಬಿದ್ದ ಚೋರಿ

ಮಡಿಕೇರಿ: ಮೂರ್ನಾಡಿನ ಸುಭಾಷ್ ನಗರದಲ್ಲಿ ಕಳೆದ ಐದು ದಿನಗಳ ಹಿಂದೆ ನಡೆದ ಮನೆಕಳವು ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದು, ಮನೆಯೊಡಯನ ಸಾಕುಮಗಳೇ ಚೋರಿ ಎನ್ನುವುದು ಖಾತ್ರಿಯಾಗಿದೆ. ಕೃಪಾಶ್ರೀ(26) ಎಂಬಾಕೆಯೇ ಬಂಧಿತ ಆರೋಪಿಯಾಗಿದ್ದಾಳೆ.

ಮೂರ್ನಾಡು ಸುಭಾಷ್ ನಗರ ನಿವಾಸಿ ವೆಂಕಟರಮಣ ಭಟ್ ಅವರು ಮೇ 20ರಂದು ಕಾರ್ಯನಿಮಿತ್ತ ಪರ ಊರಿಗೆ ತೆರಳಿದ್ದು, ಮರಳಿ ಮನೆಗೆ ಬರುವಷ್ಟರಲ್ಲಿ ಅವರ ಮನೆಯ ಹಿಂಬಾಗಿಲ ಚಿಲಕ ಮುರಿದು ಮನೆಯೊಳಗಿದ್ದ ಸುಮಾರು 3.64 ಲಕ್ಷ ರೂ. ಮೌಲ್ಯ ಚಿನ್ನಾಭರಣ ಹಾಗೂ ನಗದು ಕಳವಾಗಿತ್ತು. ಈ ಸಂಬಂಧ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದರು.

ಈ ಪ್ರಕರಣವನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರು ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರು ಹಾಗೂ ಗ್ರಾಮಾಂತರ ಠಾಣಾಧಿಕಾರಿಗೆ ನೀಡಿದ ನಿರ್ದೇಶನದ ಮೇರೆಗೆ ಕಾರ್ಯಪ್ರವೃತ್ತರಾದ ಸಿಬ್ಬಂದಿ ಮಾಹಿತಿ ಕಲೆ ಹಾಕಿದಾಗ ವೆಂಕಟರಮಣ ಭಟ್ ಅವರ ಸಾಕು ಮಗಳಾದ ಕೃಪಾಶ್ರೀ (26) ಎಂಬಾಕೆಯ ಮೇಲೆ ಶಂಕೆ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಆಕೆಯನ್ನು ಮೇ 23ರಂದು ವಿಚಾರಣೆಗೆ ಒಳಪಡಿಸಿದಾಗ ಮನೆಯ ಬಗ್ಗೆ ಸಂಪೂರ್ಣ ತಿಳಿದಿದ್ದ ಆಕೆ ಮನೆಯ ಹಿಂಬಾಗಿಲ ಚಿಲಕ ಮುರಿದು ಒಳ ಪ್ರವೇಶಿಸಿ ಚಿನ್ನಾಭರಣಗಳನ್ನು ಕಳವು ಮಾಡಿರುವುದನ್ನು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿ ಕೃಪಾಶ್ರೀ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು, ಎಮ್ಮೆಮಾಡು ಶಾಲೆಯಲ್ಲಿ ಕರ್ತವ್ಯದಲ್ಲಿರುವುದಾಗಿ ಹೇಳಲಾಗಿದ್ದು, ಆಕೆಯಿಂದ ಸುಮಾರು 3.60ಲಕ್ಷ ರೂ. ಮೌಲ್ಯದ 114 ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಡಿಕೇರಿ ಪೊಲೀಸ್ ಉಪ ಅಧೀಕ್ಷಕ ಕೆ.ಎಸ್. ಸುಂದರರಾಜ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಸಿದ್ದಯ್ಯ ಹಾಗೂ ಮಡಿಕೇರಿ ಗ್ರಾಮಾಂತರ ಠಾಣಾ ಠಾಣಾಧಿಕಾರಿ ಯತೀಶ್.ಎನ್ ಐಪಿಎಸ್(ಪ್ರೊಬೆಷನರಿ), ಮತ್ತು ವಿ.ಚೇತನ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಇಬ್ರಾಹಿಂ, ಚಂದ್ರಶೇಖರ್, ಇಟ್ನಾಳ್, ಮಂಜುನಾಥ್, ಕಾಳಿಯಪ್ಪ, ವೀಣಾ, ರಾಧಾ, ಚಾಲಕರುಗಳಾದ ಸುನಿಲ್, ಮನೋಹರ್ ಅವರು ಭಾಗವಹಿಸಿದ್ದರು.

ಈ ಪ್ರಕರಣವನ್ನು ತ್ವರಿತವಾಗಿ ಪತ್ತೆಹಚ್ಚಿದ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರು ನಗದು ಬಹುಮಾನ ಘೋಷಿಸಿದ್ದಾರೆ.

See also  ಪ್ರತ್ಯೇಕ ಅಪಘಾತ: ಸುಂಟಿಕೊಪ್ಪದಲ್ಲಿ ಇಬ್ಬರ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು