News Kannada
Thursday, September 29 2022

ಕರ್ನಾಟಕ

ಹೈಡ್ರೊಕ್ಲೋರಿಕ್ ಆಸಿಡ್ ಸೋರಿಕೆ ಜನರಲ್ಲಿ ಆತಂಕ - 1 min read

Photo Credit :

ಹೈಡ್ರೊಕ್ಲೋರಿಕ್ ಆಸಿಡ್ ಸೋರಿಕೆ ಜನರಲ್ಲಿ ಆತಂಕ

ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ತೆರಳುತ್ತಿದ್ದ ಟ್ಯಾಂಕರ್‌ನಿಂದ ಹೈಡ್ರೊಕ್ಲೋರಿಕ್ ಆಸಿಡ್ ಸೋರಿಕೆಯಾಗಿದ್ದು ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಕದ್ರಾ ಬಳಿ ಸಂಘವಿಸಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಆಸಿಡ್ ನೀರಿನ ಮೂಲಗಳಿಗೆ ಸೇರಿರುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕದ್ರಾ ಕೆಪಿಸಿ ಕಾಲನಿ, ಕಾಳಿ ಬಲ ದಂಡೆಯ ೧೩ ಗ್ರಾಮಗಳಿಗೆ ನೀರು ಹರಿಸುವ ಗೋಟೆಗಾಳಿ ಕುಡಿಯುವ ನೀರಿನ ಯೋಜನೆಯಿಂದ ನೀರು ಪೂರೈಕೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಕದ್ರಾ ಗ್ರಾಪಂ, ಕೈಗಾ ಸುರಕ್ಷಾ ವಿಭಾಗ, ಕೆಪಿಸಿ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು ಯಾವುದೇ ಅಪಾಯವಿಲ್ಲ. ಜನರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಶೌಚಗೃಹ ಸ್ವಚ್ಛ ಮಾಡುವ ಹೈಡ್ರೋಕ್ಲೋರಿಕ್ ಆಸಿಡ್ ತುಂಬಿದ ತಮಿಳುನಾಡು ನೋಂದಣಿ ಸಂಖ್ಯೆ ಹೊಂದಿದ ಖಾಸಗಿ ಟ್ರಾನ್ಸ್‌ಪೋರ್ಟ್‌ನ ಟ್ಯಾಂಕರ್ ಬುಧವಾರ ಕೈಗಾದತ್ತ ಹೊರಟಿತ್ತು. ಆದರೆ, ದಾರಿ ತಪ್ಪಿದ್ದರಿಂದ ಚಾಲಕ ಟ್ಯಾಂಕರ್‌ನ್ನು ರಸ್ತೆಯಲ್ಲಿ ತಿರುಗಿಸಲು ಮುಂದಾಗಿದ್ದ. ಮಳೆ ಸುರಿದಿದ್ದರಿಂದ ಟ್ಯಾಂಕರ್‌ನ ಚಕ್ರಗಳು ಕೆಸರಿನಲ್ಲಿ ಸಿಲುಕಿತ್ತು. ಟ್ಯಾಂಕರ್ ಮೇಲೆತ್ತಲು ಒಂದು ದಿನ ಪ್ರಯತ್ನಿಸಿದ ಚಾಲಕ ವಿಫಲನಾಗಿದ್ದಾನೆ.

ಬಳಿಕ ಖಾಸಗಿ ಜೆಸಿಬಿ ತಂದು ಟ್ಯಾಂಕರ್ ಎತ್ತುವ ಕಾರ್ಯಕ್ಕೆ ಮುಂದಾಗಿದ್ದ. ಈ ಸಂದರ್ಭದಲ್ಲಿ ಜೆಸಿಬಿ ಟ್ಯಾಂಕರ್‌ನ ವಾಲ್ವ್‌ಗೆ ತಾಗಿ ಆಸಿಡ್ ಹೊರ ಬಂದಿದೆ. ಒಟ್ಟು ೧೮ ಲೀಟರ್ ಆಸಿಡ್ ಚರಂಡಿ ಮೂಲಕ ಹರಿದು ಹೋಗಿದೆ. ಅಲ್ಲದೆ, ಸುತ್ತಲೂ ಇದ್ದ ಗಿಡ ಗಂಟಿಗಳು ಸುಟ್ಟು ಹೋಗಿವೆ. ಗಟನೆ ಸುದ್ದಿ ಗ್ರಾಮದಲ್ಲಿ ಹರಡಿ ಜನರಲ್ಲಿ ಆತಂಕ ಮನೆ ಮಾಡಿತ್ತು. ವಿಷಯ ತಿಳಿಯುತ್ತಿದ್ದಂತೆ ಕದ್ರಾ ಗ್ರಾಪಂ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದು, ಸಹಾಯಕ್ಕಾಗಿ ಕೈಗಾ ಸುರಕ್ಷತಾ ವಿಭಾಗಕ್ಕೆ ಕರೆ ಮಾಡಿದ್ದರು. ಪೊಲೀಸ್, ಅರಣ್ಯ, ಕೆಪಿಸಿ ಕೈಗಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸೇರಿ ಟ್ಯಾಂಕರ್ ಮೇಲೆತ್ತಿದ್ದಾರೆ.

See also  ಮಡಿಕೇರಿಯಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು