News Kannada
Friday, September 30 2022

ಕರ್ನಾಟಕ

ಗುಂಡ್ಲುಪೇಟೆಯಲ್ಲಿ ಶೌಚಾಲಯವಿದ್ದರೂ ಉಪಯೋಗವಿಲ್ಲ - 1 min read

Photo Credit :

ಗುಂಡ್ಲುಪೇಟೆಯಲ್ಲಿ ಶೌಚಾಲಯವಿದ್ದರೂ ಉಪಯೋಗವಿಲ್ಲ

ಚಾಮರಾಜನಗರ: ದೇಶದಾದ್ಯಂತ ಸ್ವಚ್ಛತಾ ಅಭಿಯಾನ ನಡೆಯುತ್ತಿದ್ದು, ಜಿಲ್ಲಾಡಳಿತ ಕೂಡ ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದು, ಬಯಲು ಶೌಚಾಲಯ ತಡೆಗೆ ಆದ್ಯತೆ ನೀಡುವ ಸಲುವಾಗಿ ಸಾರ್ವಜನಿಕ ಶೌಚಾಲಯಗಳನ್ನು ಹೆಚ್ಚು ಹೆಚ್ಚಾಗಿ ನಿರ್ಮಿಸಲಾಗುತ್ತಿದೆ. ಆದರೆ ಈ ಶೌಚಾಲಯ ಇದ್ದರೂ ಸಾರ್ವಜನಿಕರ ಬಳಕೆಗೆ ಬಾರದಂತಾಗಿರುವುದು ಗುಂಡ್ಲುಪೇಟೆಯಲ್ಲಿ ಕಂಡು ಬಂದಿದೆ.

ಗುಂಡ್ಲುಪೇಟೆ ಪಟ್ಟಣದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡುವ ಸಲುವಾಗಿ ಮತ್ತು ಪ್ರತಿನಿತ್ಯ ಸಾವಿರಾರು ಸಾರ್ವಜನಿಕರು ತಮ್ಮ ಕೆಲಸಕಾರ್ಯಗಳಿಗಾಗಿ ಪಟ್ಟಣಕ್ಕೆ ಬರುತ್ತಿರುವುದರಿಂದ ಅವರಿಗೆ ಶೌಚಾಲಯದ ವ್ಯವಸ್ಥೆ ಇಲ್ಲದೆ ಎಲ್ಲೆಂದರಲ್ಲಿ ಮೂತ್ರ ಮತ್ತು ಮಲವಿಸರ್ಜನೆ ಮಾಡಿ ವಾತಾವರಣವನ್ನೇ ಗಬ್ಬೆಬ್ಬಿಸುತ್ತಿದ್ದರಿಂದ ಇದನ್ನೆಲ್ಲ ತಡೆಯುವ ಸಲುವಾಗಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ ಇವುಗಳನ್ನು ಉಪಯೋಗಿಸಲು ಅವಕಾಶ ನೀಡದ ಕಾರಣ ಜನರಿಗೆ ಶೌಚಾಲಯಗಳು ಇದ್ದು ಇಲ್ಲದಂತಾಗಿದೆ.

ಪಟ್ಟಣದ ತಾಲೂಕು ಕಚೇರಿ, ಪುರಸಭೆ, ಸಾರ್ವಜನಿಕ ಆಸ್ಪತ್ರೆ, ಸಮಾಜ ಕಲ್ಯಾಣ, ಸಬ್ ರಿಜಿಸ್ಟ್ರಾರ್, ಬ್ಯಾಂಕುಗಳು ಸೇರಿದಂತೆ ಬೇರಾವುದೇ ಸರ್ಕಾರಿ ಕಚೇರಿಗಳ ಬಳಿಯೂ ಸಾರ್ವಜನಿಕ ಶೌಚಾಲಯಗಳಿಲ್ಲ. ಎಲ್ಲ ಕಚೇರಿಗಳಲ್ಲಿಯೂ ಸಿಬ್ಬಂದಿಗೆ ಮಾತ್ರ ವ್ಯವಸ್ಥೆ ಇದೆ. ಹೀಗಾಗಿ ಪುರುಷರು ಕಚೇರಿಗಳ ಕಾಂಪೌಂಡ್ ಹಾಗೂ ಗೋಡೆಗಳ ಬಳಿ ನಿಂತು ಮೂತ್ರ ವಿಸರ್ಜನೆ ಮಾಡುತ್ತಿದ್ದು ಇದರಿಂದ ಸುತ್ತಲೂ ಗಬ್ಬುನಾರುತ್ತಿದೆ. ಮಹಿಳೆಯರು ಎಲ್ಲಿಯೇ ಇದ್ದರೂ ಸಾರಿಗೆ ಬಸ್ ನಿಲ್ದಾಣಕ್ಕೆ ತೆರಳಬೇಕಾಗಿದೆ. ಇದರಿಂದ ಗ್ರಾಮಾಂತರ ಪ್ರದೇಶಗಳು ಹಾಗೂ ಹೊರಗಿನಿಂದ ಪಟ್ಟಣಕ್ಕೆ ಬರುವ ಸಾರ್ವಜನಿಕರು ಅದರಲ್ಲಿಯೂ ಮಹಿಳೆಯರು ಹಾಗೂ ಮಕ್ಕಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಕಳೆದ ವರ್ಷ ಇಲ್ಲಿನ ಪುರಸಭೆಯು ತಲಾ ಸುಮಾರು 10 ಲಕ್ಷ ರೂ ವೆಚ್ಚದಲ್ಲಿ ಪಟ್ಟಣದ ತಾಲೂಕು ಕಚೇರಿ, ಸಾರ್ವಜನಿಕ ಆಸ್ಪತ್ರೆ ಹಾಗೂ ಸೆಸ್ಕ್ ಕಚೇರಿ ಬಳಿ ಮೂರು ಶೌಚಾಲಯ ನಿಮರ್ಾಣಕ್ಕೆ ಹಣ ಬಿಡುಗದೆ ಮಾಡಿತ್ತು. ಶೌಚಾಲಯ ಕಟ್ಟಡ ನಿಮರ್ಾಣ ಕಾಮಗಾರಿ ಪ್ರಾರಂಭವಾಗಿ ವರ್ಷವೇ ಕಳೆದಿದ್ದು ಬಹುತೇಕ ಕೆಲಸಗಳು ಮುಗಿದಿದ್ದರೂ ಇನ್ನೂ ಇವುಗಳನ್ನು ಬಳಕೆಗೆ ನೀಡಿಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪುರಸಭೆಯ ಅನುದಾನದ ಮೂರು ಶೌಚಾಲಯಗಳ ಕಾಮಗಾರಿಗಳು ಮುಗಿದಿದ್ದು ವಿಧಾನಸಭೆ ಹಾಗೂ ಪರಿಷತ್ ಸ್ಥಾನಗಳ ಚುನಾವಣೆ ನೀತಿ ಸಂಹಿತೆ ಕಾರಣದಿಂದ ಬಳಕೆಗೆ ತಂದಿಲ್ಲ. ಮುಂದಿನ ವಾರದೊಳಗೆ ಬಳಕೆಗೆ ತರಲಾಗುವುದು ಎಂಬುದು ಪುರಸಭೆ ಅಧಿಕಾರಿಗಳ ಮಾತಾಗಿದೆ. ಆದಷ್ಟು ಬೇಗ ಶೌಚಾಲಯಗಳನ್ನು ಸಾರ್ವಜನಿಕರ ಬಳಕೆಗೆ ಅವಕಾಶ ಮಾಡಿಕೊಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

See also  ಆಕಸ್ಮಿಕ ಬೆಂಕಿ: ಕಬ್ಬು ಬೆಳೆ ಭಸ್ಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು