News Kannada
Monday, September 26 2022

ಕರ್ನಾಟಕ

ಕೊಡಗಿನಲ್ಲಿ ಇಳಿದ ಮಳೆ: ಉಳಿದ ಆತಂಕ - 1 min read

Photo Credit :

ಕೊಡಗಿನಲ್ಲಿ ಇಳಿದ ಮಳೆ: ಉಳಿದ ಆತಂಕ

ಮಡಿಕೇರಿ: ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಸುರಿದು ಸಾಕಷ್ಟು ಹಾನಿ ಮಾಡಿದ ಮುಂಗಾರು ಶುಕ್ರವಾರ ಬಿಡುವು ನೀಡಿದ್ದು, ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸೂರ್ಯನ ದರ್ಶನವಾಗಿದೆ.

ಇದರೊಂದಿಗೆ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದ ಕಾವೇರಿ, ಲಕ್ಷ್ಮಣ ತೀರ್ಥ ನದಿಗಳಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದ್ದು, ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ.

ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲೂ ಶುಕ್ರವಾರ ಬಿಸಿಲು ಕಾಣಿಸಿಕೊಂಡಿದ್ದು, ಸಂತೆ ದಿನವಾಗಿದ್ದರಿಂದ ಜನರ ಓಡಾಟ ಎಂದಿಗಿಂತ ಹೆಚ್ಚಾಗಿತ್ತು. ಅದರಲ್ಲೂ ಮಳೆ ಬಿಡುವು ನೀಡಿದ್ದರಿಂದ ನಗರ ವ್ಯಾಪ್ತಿಯ ಜನರಲ್ಲಿ ಲವಲವಿಕೆ ಕಂಡು ಬಂದಿತ್ತು. ಮಂಜು ಮುಸುಕಿದ ವಾತಾವರಣದ ಸೊಬಗನ್ನು ವೀಕ್ಷಿಸಲು ಸಾವಿರಾರು ಪ್ರವಾಸಿಗರು ನಿರಾತಂಕವಾಗಿ ಆಗಮಿಸುತ್ತಿದ್ದಾರೆ.

ಆದರೆ ದಕ್ಷಿಣ ಕೊಡಗು, ಭಾಗಮಂಡಲ ಹಾಗೂ ನಾಪೋಕ್ಲು ಭಾಗದಲ್ಲಿ ನದಿ ತೊರೆಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಆತಂಕ ಮುಂದುವರಿದಿದೆ. ಮಳೆಗಾಲ ಆರಂಭವಾಗಿ 15 ದಿನಗಳಷ್ಟೇ ಆಗಿದ್ದು, ಈ ಅಲ್ಪಾವಧಿಯಲ್ಲೇ ಮಹಾಮಳೆಯಿಂದ ಸಾಕಷ್ಟು ಕಷ್ಟ, ನಷ್ಟ, ಸಾವು, ನೋವುಗಳು ಸಂಭವಿಸಿದೆ. ಕೊಡಗಿನಲ್ಲಿ ಇನ್ನೂ ಮೂರು ತಿಂಗಳು ಮಳೆ ಸುರಿಯುವುದರಿಂದ ಇನ್ನೆಷ್ಟು ಅನಾಹುತಗಳು ಕಾದಿದೆಯೋ ಎನ್ನುವ ಭಯದಲ್ಲಿ ಜನರಿದ್ದಾರೆ.

See also  ಭಕ್ತರ ಹರ್ಷೋದ್ಘಾರದ ನಡುವೆ ತಲಕಾವೇರಿಯಲ್ಲಿ ತೀರ್ಥೋದ್ಭವ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು