News Kannada
Sunday, September 25 2022

ಕರ್ನಾಟಕ

ಪ್ರತ್ಯೇಕ ಪ್ರಕರಣ: ತಾಯಿ- ಮಗ, ತಂದೆ- ಮಗಳು ಸಾವು - 1 min read

Photo Credit :

ಪ್ರತ್ಯೇಕ ಪ್ರಕರಣ: ತಾಯಿ- ಮಗ, ತಂದೆ- ಮಗಳು ಸಾವು

ಹಾಸನ: ಪೈಪ್ ತುಂಬಿದ್ದ ಲಾರಿಗೆ ಟಿಟಿ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ತಾಯಿ-ಮಗ ಮೃತಪಟ್ಟಿರುವ ದಾರುಣ ಘಟನೆ ಚನ್ನರಾಯಪಟ್ಟಣದ ಶೆಟ್ಟಿಹಳ್ಳಿ ಬಳಿ ನಡೆದಿದೆ.

ತಾಯಿ ಷಹಜಾತ್(35), ಹಾಗೂ ಮಗು ಉಮರ್(3) ಮೃತ ದುರ್ದೈವಿಗಳು. ಈ ದುರ್ಘಟನೆ ಬೆಳಿಗ್ಗೆ 5ಗಂಟೆಗೆ ನಡೆದಿದೆ. ಲಾರಿಗೆ ಟಿಟಿ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಟಿಟಿ ವಾಹನದಲ್ಲಿದ್ದ ತಾಯಿ ಹಾಗೂ ಮಗು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ಗಾಯಗೊಂಡ ಐವರ ಪೈಕಿ ಟಿಟಿ ಚಾಲಕ ಶಫಿ ಎಂಬವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಕೂಡಲೇ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಬೆಂಗಳೂರಿನ ಗೌರಿ ಪಾಳ್ಯ ನಿವಾಸಿಗಳಾಗಿದ್ದು ಒಂದೇ ಕುಟುಂಬದವರು ಎಂದು ತಿಳಿದು ಬಂದಿದೆ. ಇವರೆಲ್ಲರೂ ಹಾಸನದ ದರ್ಗಾವೊಂದಕ್ಕೆ ಹೊರಟಿದ್ದರು ಅಂತಾ ತಿಳಿದುಬಂದಿದೆ. ಈ ಕುರಿತಂತೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ: ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಅಪ್ಪ, ಮಗಳು ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಹೊಸದುರ್ಗದ ಜವಳಿ ಉದ್ಯಮಿ ಮಂಜುನಾಥ್ (40), ಪುತ್ರಿ ರಾಜೇಶ್ವರಿ(1) ಮೃತ ದುರ್ದೈವಿಗಳು. ಮಂಜುನಾಥ್ ಪತ್ನಿ ಶಿಲ್ಪ, ಮಗಳು ಶಾರದ, ಸಾನ್ವಿತ ಹಾಗೂ ಸ್ನೇಹಿತ ರಂಗನಾಥ ಗಾಯಗೊಂಡಿದ್ದು ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 

See also  ಸೋಮವಾರಪೇಟೆ: ಭಾರಿ ಮಳೆಗೆ ರಸ್ತೆಯಲ್ಲಿ ಬಿರುಕು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು