News Kannada
Sunday, September 25 2022

ಕರ್ನಾಟಕ

ಮಹಿಳಾ ಪೊಲೀಸ್ ಅಧಿಕಾರಿಯಿಂದ ಹಣ ವಸೂಲಿ - 1 min read

Photo Credit :

ಮಹಿಳಾ ಪೊಲೀಸ್ ಅಧಿಕಾರಿಯಿಂದ ಹಣ ವಸೂಲಿ

ಮಂಡ್ಯ: ಪುರುಷ ಪೊಲೀಸ್ ಅಧಿಕಾರಿಗಳಿಗಿಂತ ನಾವೇನು ಕಡಿಮೆಯಿಲ್ಲ ಎಂಬಂತೆ ವಸೂಲಿಗೆ ನಿಂತ ಮಹಿಳಾ ಎಎಸ್‍ಐವೊಬ್ಬರ ಲಂಚ ವಸೂಲಿ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕೇವಲ 50 ರೂ.ಲಂಚ ಪಡೆಯುತ್ತಿರುವ ದೃಶ್ಯ ಇದಾಗಿದ್ದು, ಇದನ್ನು ನೋಡಿದವರು ಮಹಿಳಾ ಪೊಲೀಸ್ ಅಧಿಕಾರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇಷ್ಟಕ್ಕೂ ಆಗಿರುವುದೇನೆಂದರೆ ಮದ್ದೂರು ಪಟ್ಟಣದ ಸಂಚಾರ ಠಾಣೆ ವ್ಯಾಪ್ತಿಯ ಹೈವೇ ಪಟ್ರೋಲ್ ಗಸ್ತು ವಾಹನದ ಕರ್ತವ್ಯದಲ್ಲಿದ್ದ ಎಎಸ್‍ಐ ಶೋಭಾ ವಾಹನ ಚಾಲಕರು ಮತ್ತು ಸವಾರರಿಂದ ಇಂತಿಷ್ಟು ಎಂಬಂತೆ ಹಣ ವಸೂಲಿಗೆ ಇಳಿದಿದ್ದಾರೆ.

ಹೈವೆಗಳಲ್ಲಿ ಅಡ್ಡಾಡುವ ಲಾರಿ ಸೇರಿದಂತೆ ಇತರೆ ವಾಹನಗಳಿಗೆ ಇದರ ಮರ್ಮ ಗೊತ್ತಿದ್ದು, ವಾಹನ ಚಾಲಕರೇ ಪೊಲೀಸ್ ಜೀಪಿನತ್ತ ಬಂದು ಅಧಿಕಾರಿಗೆ ಕೈಗೆ ರೂ.50ನ್ನು ನೀಡಿ ಹೋಗುತ್ತಾರೆ. ಅದರಂತೆ ಎಎಸ್‍ಐ ಶೋಭ ಅವರಿಗೂ ನೀಡಿದ್ದಾರೆ. ಆದರೆ ಇದನ್ನು ಯಾರೋ ಮೊಬೈಲ್‍ನಲ್ಲಿ ಗೌಪ್ಯವಾಗಿ ಚಿತ್ರೀಕರಿಸಿ ವಾಟ್ಸಾಪ್‍ಗಳ ಮೂಲಕ ಹರಿಯಬಿಟ್ಟಿದ್ದಾರೆ. ಇದೀಗ ಆ ದೃಶ್ಯ ಹರಿದಾಡುತ್ತಿದ್ದು, ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ಜತೆಗೆ ಪ್ರಾಮಾಣಿಕ ಅಧಿಕಾರಿಗಳಿಗೆ ಕಪ್ಪು ಚುಕ್ಕೆಯಾಗಿದೆ.

ಎಸ್ಪಿ ರಾಧಿಕಾ ಅವರು ಈ ದೃಶ್ಯ ನೋಡಿದ ಬಳಿಕ ಯಾವ ರೀತಿಯ ಕಾನೂನು ಕ್ರಮಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

See also  ಹವಳ ದಂಡೆಯ ಬಳಿಕ ಕಾಣುವ ಅಪರೂಪದ ಮೀನು ಕಾರವಾರ ಕಡಲ ತೀರದಲ್ಲಿ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು