News Kannada
Tuesday, November 29 2022

ಕರ್ನಾಟಕ

ದುಬೈಗೆ ಹೋಗಿದ್ದ ಕಾಸರಗೋಡಿನ 11 ಮಂದಿ ನಿಗೂಢ ನಾಪತ್ತೆ! - 1 min read

Photo Credit :

ದುಬೈಗೆ ಹೋಗಿದ್ದ ಕಾಸರಗೋಡಿನ 11 ಮಂದಿ ನಿಗೂಢ ನಾಪತ್ತೆ!

ಕಾಸರಗೋಡು: ದುಬೈಗೆ ಹೊರಟಿದ್ದ ಕಾಸರಗೋಡಿನ ಎರಡು ಕುಟುಂಬದ 11 ಮಂದಿ ನಿಗೂಢವಾಗಿ ನಾಪತ್ತೆಯಾಗಿರುವುದಾಗಿ ಕಾಸರಗೋಡು ಪೊಲೀಸರಿಗೆ ದೂರು ಲಭಿಸಿದೆ.

ಚೆಮ್ನಾಡ್ ಮುಂಡಕುಲದ ಅಬ್ದುಲ್ ಹಮೀದ್ ನೀಡಿದ ದೂರಿನಂತೆ ಮಹಿಳೆ, ಮಕ್ಕಳು ಸೇರಿದಂತೆ ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ಮೊದಲ ದೂರು ದಾಖಲಾಗಿದೆ.

ಅಬ್ದುಲ್ ಹಮೀದ್ ರ ಪುತ್ರಿ ನಸೀರಾ (25) ಪತಿ ಮೊಗ್ರಾಲ್ ನ ಸವಾದ್ ( 35), ಮಕ್ಕಳಾದ ಮುಸಾಬ್ (6), ಮರ್ಜನಾ (3), 11 ತಿಂಗಳ ಮಗು ಮುಹಮ್ಮಿಲ್, ಸವಾದ್ ನ ಎರಡನೇ ಪತ್ನಿ ಚೆಮ್ನಾಡ್ ನ ರೆಹನತ್ (25) ನಾಪತ್ತೆಯಾಗಿದ್ದಾರೆ.

ಇವರ ಜೊತೆ ಅಣಂಗೂರು ಕೊಲ್ಲಂಪಾಡಿಯ ಅನ್ಸಾರ್, ಪತ್ನಿ ಝೀನತ್ , ಮೂವರು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಇನ್ನೊಂದು ದೂರು ನೀಡಲಾಗಿದೆ.

ಜೂನ್ 15 ರಿಂದ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಯಾವುದೇ ಮಾಹಿತಿ ಇಲ್ಲದಿರುವುದರಿಂದ ಯಾವುದಾದರೂ ಸಂಘಟನೆಗೆ ಸೇರ್ಪಡೆಗೊಂಡಿರಬಹುದೇ ಎಂಬ ಸಂಶಯ ಉಂಟಾಗಿದೆ.

ವರ್ಷದ ಹಿಂದೆ ಪಡನ್ನದಿಂದ ಹದಿನೈದಕ್ಕೂ ಅಧಿಕ ಮಂದಿ ನಾಪತ್ತೆ ಯಾಗಿದ್ದು, ಬಳಿಕ ಇವರು ಐಸಿಸ್ ಸಂಘಟನೆಗೆ ಸೇರ್ಪಡೆಗೊಂಡ ಬಗ್ಗೆ ಮಾಹಿತಿ ಲಭಿಸಿತ್ತು.

ಇದರಿಂದ ನಿಗೂಢವಾಗಿ ನಾಪತ್ತೆಯಾದ 11 ಮಂದಿಯ ಬಗ್ಗೆ ಸಾಕಷ್ಟು ಸಂಶಯಕ್ಕೆ ಕಾರಣವಾಗಿದ್ದು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

See also  ಬೈಕ್ ನಲ್ಲಿ ಬಂದು ಮಹಿಳೆಯ ಚಿನ್ನದ ಸರ ಎಳೆದ ಪ್ರಕರಣ: ಇಬ್ಬರ ಸೆರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು