News Kannada
Sunday, December 04 2022

ಕರ್ನಾಟಕ

ಕಳೆದ ವಾರ ಜಲಪಾತಕ್ಕೆ ಬಿದ್ದ ಮನೋಜ್ ಮೃತದೇಹ ಪತ್ತೆ

Photo Credit :

ಕಳೆದ ವಾರ ಜಲಪಾತಕ್ಕೆ ಬಿದ್ದ ಮನೋಜ್ ಮೃತದೇಹ ಪತ್ತೆ

ಸೋಮವಾರಪೇಟೆ: ಮಲ್ಲಳ್ಳಿ ಜಲಪಾತದಲ್ಲಿ ಕಳೆದ ಶುಕ್ರವಾರ ಕಾಲು ಜಾರಿಬಿದ್ದು ಮೃತಪಟ್ಟ ಕುಶಾಲನಗರ ಸುಂದರನಗರ ನಿವಾಸಿ ಮನೋಜ್(24)ನ ಮೃತದೇಹ ಶುಕ್ರವಾರ ಪತ್ತೆಯಾಗಿದೆ.

ಮಲ್ಲಳ್ಳಿ ಗ್ರಾಮದ ಕೃಷಿಕ ಮಲ್ಲಪ್ಪ ನೀಡಿದ ಮಾಹಿತಿಯನ್ವಯ, ಠಾಣಾಧಿಕಾರಿ ಎಂ.ಶಿವಣ್ಣ ನೇತೃತ್ವದ ತಂಡ ನದಿಯಲ್ಲಿ ಶೋಧ ನಡೆಸಿ ಮೃತದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಜಲಪಾತದಿಂದ ಒಂದು ಕಿ.ಮೀ. ದೂರದಲ್ಲಿ ಕುಮಾರಧಾರ ನದಿಯ ಬದಿಯಲ್ಲಿ ಬಳ್ಳಿಯೊಂದಕ್ಕೆ ಸಿಲುಕಿಕೊಂಡಿದ್ದ ಮೃತದೇಹವನ್ನು ಹೊರ ತೆಗೆಯಲಾಗಿದೆ. ಸ್ಥಳೀಯ ಗ್ರಾಮಸ್ಥರ ಸಹಕಾರದಿಂದ ಎರಡು ಕಿ.ಮೀ. ಕಾಲು ದಾರಿಯಲ್ಲಿ ಶವವನ್ನು ಸಾಗಿಸಿ, ನಂತರ ವಾಹನದಲ್ಲಿ ಸೋಮವಾರಪೇಟೆ ಶವಗಾರಕೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಕಳೆದ ಎರಡು ದಿನಗಳಿಂದ ಆ ಭಾಗದಲ್ಲಿ ಮಳೆ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿರುವುದರಿಂದ ಮೃತದೇಹ ಶೋಧಕ್ಕೆ ಅಡಚಣೆಯಾಗಲಿಲ್ಲ ಎಂದು ಠಾಣಾಧಿಕಾರಿ ಶಿವಣ್ಣ ತಿಳಿಸಿದ್ದಾರೆ.

ಸ್ಥಳೀಯರಾದ ಪೊನ್ನಪ್ಪ, ನಿಖಿಲ್, ಸೋಮವಾರಪೇಟೆ ಆಟೋ ಚಾಲಕ ಹಸನಬ್ಬ, ಪೊಲೀಸ್ ಸಿಬ್ಬಂದಿ ಶಿವಕುಮಾರ್, ಜಗದೀಶ್, ಕುಮಾರ್, ಸಿದ್ದರಾಮ ಅವರುಗಳು ಶವದ ಶೋಧ ಕಾರ್ಯದಲ್ಲಿ ಭಾಗವಹಿಸಿದ್ದರು.

ಮುಳುಗುತಜ್ಞ ರಾದ ಹುಣಸೂರಿನ ಫಕೀರಪ್ಪ, ಕುಶಾಲನಗರದ ರಾಮಕೃಷ್ಣ, ಗರಗಂದೂರಿನ ಲತೀಪ್ ಅವರುಗಳು ಕಳೆದ ನಾಲ್ಕು ದಿನಗಳ ಕಾಲ ಜಲಪಾತದ ಬಂಡೆಗಳನ್ನು ಇಳಿದು ಹುಡುಕಾಟ ನಡೆಸಿದ್ದರು. ಆದರೂ ಮೃತದೇಹದ ಸುಳಿವು ಸಿಕ್ಕಿರಲಿಲ್ಲ.

 

See also  ಜು.15ರಿಂದ ಕೊಡಗಿನಲ್ಲಿ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಮಾತ್ರ ವ್ಯವಹಾರಕ್ಕೆ ಅವಕಾಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು