ಚಾಮರಾಜನಗರ: ಕೃಷಿ ಹೊಂಡದಲ್ಲಿ ಬಿದ್ದು ಪರದಾಡುತ್ತಿದ್ದ ಮೂರು ಆನೆಗಳನ್ನು ಅರಣ್ಯ ಸಿಬ್ಬಂದಿ ರಕ್ಷಿಸಿದ ಘಟನೆ ಸತ್ಯಮಂಗಲದ ಬಳಿ ನಡೆದಿದೆ.
ಚಾಮರಾಜನಗರ ಮತ್ತು ತಮಿಳುನಾಡಿನ ಗಡಿ ಪ್ರದೇಶದಲ್ಲಿರುವ ಸತ್ಯಮಂಗದ ಕಾಡಂಚಿನ ಗ್ರಾಮವಾದ ಕನಕುಂದೂರು ಗ್ರಾಮದ ಕೃಷಿ ಹೊಂಡಕ್ಕೆ ಮೂರು ಕಾಡಾನೆಗಳು ಬಿದ್ದು ಪರದಾಡುತ್ತಿತ್ತು. ಹೊಂಡ ಆಳವಾಗಿದ್ದ ಕಾರಣ ಆನೆಗಳು ಮೇಲೆ ಬರಲು ಸಾಧ್ಯವಾಗದೇ ಗಾಬರಿಗೊಂಡು ಚೀರಾಟ ನಡೆಸಿವೆ. ಇದನ್ನಯ ಕೇಳಿದ ಕೃಷಿಕರು ಹೊಂಡದ ಬಳಿ ನೋಡಿದಾಗ ಾನೆಗಳು ಬಿದ್ದಿರುವುದನ್ನು ಗಮನಿಸಿದ್ದಾರೆ.
ತಕ್ಷಣ ೀ ವಿಷಯವನ್ನು ಅರಣ್ಯ ಇಲಾಖೆಗೆ ಸುದ್ದಿ ತಲುಪಿಸಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಆನೆಗಳನ್ನು ಮೇಲೆ ತರಲು ಜೆಸಿಬಿ ಯಂತ್ರದ ಸಹಾಯದಿಂದ ಕೃಷಿ ಹೊಂಡದ ಬಳಿ ದಾರಿ ಮಾಡಿಕೊಟ್ಟಿದ್ದಾರೆ.
ಕಾಡಾನೆಗಳು ಒಂದರ ಸಹಾಯದೊಂದಿಗೆ ಮತ್ತೊಂದು ಆನೆ ಕೃಷಿ ಹೊಂಡದಿಂದ ಮೇಲೆ ಬಂದು ಮರಳಿ ಕಾಡಿಗೆ ಸೇರಿವೆ.