ಕಾಸರಗೋಡು: ಕಾಸರಗೋಡು ಬಿಎಸ್ ಎನ್ ಎಲ್ ಡಿವಿಜನ್ ಇಂಜಿನಿಯರ್ ರನ್ನು ಇರಿದು ಕೊಲೆಗೈದ ಘಟನೆ ಮಂಗಳವಾರ ಸಂಜೆ ಬೋವಿಕ್ಕಾನ ದಲ್ಲಿ ನಡೆದಿದೆ.
ಕೊಲೆಗೀಡಾದವರನ್ನು ಸುಧಾಕರ(55) ಎಂದು ಗುರುತಿಸಲಾಗಿದೆ.
ಮಲ್ಲ ನಿವಾಸಿಯಾಗಿರುವ ಸುಧಾಕರ ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಕೃತ್ಯ ನಡೆದಿದೆ. ಮನೆಯಿಂದ 200 ಮೀಟರ್ ನಷ್ಟು ದೂರದಲ್ಲಿ ಕೊಲೆ ನಡೆದಿದೆ. ಕತ್ತಿಯಲ್ಲಿ ಕಡಿದು ಕೊಲೆ ಮಾಡಲಾಗಿದ್ದು, ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ತೆರಳಿದ್ದು , ಕೃತ್ಯಕ್ಕೆ ನಿಖರ ಮಾಹಿತಿ ಇನ್ನಷ್ಟು ತಿಳಿದುಬರಬೇಕಿದೆ.