ಕೊಡಗು: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಕೂಲಿ ಕಾರ್ಮಿಕ ಸಾವನ್ನಪ್ಪಿದ ಘಟನೆ ಮಡಿಕೇರಿ ತಾಲ್ಲೂಕಿನ ಕುಂದಚೇರಿ ಗ್ರಾಮದಲ್ಲಿ ನಡೆದಿದೆ. ಚೆಟ್ಟಿಮಾನಿಯ ಪೂವ(೬೫) ಮೃತ ಕೂಲಿ ಕಾರ್ಮಿಕ.
ಕೆದಂಬಾಡಿ ರಮೇಶ್ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಸಿಲ್ವರ್ ಏಣಿಯನ್ನು ಸ್ಥಳಾಂತರಿಸುವಾಗ ತೋಟದಲ್ಲಿ ಹಾದು ಹೋಗಿದ್ದ 11ಕೆವಿ ವಿದ್ಯುತ್ ಲೈನ್ ಸ್ಪರ್ಶಿಸಿ ಕಾರ್ಮಿಕ ಸಾವನ್ನಪ್ಪಿದ್ದು, ಅರ್ಧ ದೇಹ ಬೆಂದು ಹೋಗಿದೆ.