News Kannada
Friday, December 09 2022

ಕರ್ನಾಟಕ

ಮಳೆ ಶಾಂತವಾದರೂ ತಗ್ಗದ ಪ್ರವಾಹ: ಕೊಡಗಿನಲ್ಲಿ ಅತಿವೃಷ್ಟಿ ಹಾನಿ

Photo Credit :

ಮಳೆ ಶಾಂತವಾದರೂ ತಗ್ಗದ ಪ್ರವಾಹ: ಕೊಡಗಿನಲ್ಲಿ ಅತಿವೃಷ್ಟಿ ಹಾನಿ

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಮಳೆಯ ತೀವ್ರತೆ ಗುರುವಾರ ಕೊಂಚ ತಗ್ಗಿದೆಯಾದರೂ ಜೀವನದಿ ಕಾವೇರಿಯ ಪ್ರವಾಹ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.

ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ತಗ್ಗಿ, ಬಿರುಸಿನ ಗಾಳಿ ಕಂಡು ಬಂದು ಆತಂಕ ಮೂಡಿಸಿತು. ಕಾವೇರಿಯ ಕ್ಷೇತ್ರ ಭಾಗಮಂಡಲದಲ್ಲಿ ರಾತ್ರಿಯ ಅವಧಿಯಲ್ಲಿ ಮಳೆಯ ಪ್ರಮಾಣ ಇಳಿಮುಖಗೊಂಡರೂ ಪ್ರವಾಹದ ಮಟ್ಟ ತಗ್ಗಿಲ್ಲ.

ಪ್ರವಾಹದಲ್ಲಿ ಸಿಲುಕಿದ ಕಾರು
ಭಾಗಮಂಡಲದ ಅಯ್ಯಂಗೇರಿ ರಸ್ತೆಯ ಮೇಲೆ ಮೂರು ಅಡಿಗಳಿಗೂ ಹೆಚ್ಚಿನ ಪ್ರವಾಹದ ನೀರು ಆವರಿಸಿದೆ. ಈ ರಸ್ತೆಯಲ್ಲಿ ಅಪಾಯದ ಅರಿವಿಲ್ಲದೆ ಚಲಿಸಿದ ತಮಿಳುನಾಡಿನ ಪ್ರವಾಸಿಗರನ್ನು ಹೊಂದಿದ ಕಾರೊಂದು ನೀರಿನಲ್ಲಿ ಸಿಲುಕಿಕೊಂಡ ಘಟನೆ ಗುರುವಾರ ಬೆಳಗ್ಗೆ ನಡೆಯಿತು.

ತಲಕಾವೇರಿಗೆ ತೆರಳಿ ಹಿಂದಿರುಗುತ್ತಿದ್ದ ಪ್ರವಾಸಿಗರ ಕಾರು ಅಯ್ಯಂಗೇರಿ ರಸ್ತೆಯ ಪ್ರವಾಹದ ನೀರಿನಲ್ಲಿ ಸಾಗಿತ್ತು. ಈ ಸಂದರ್ಭ ಅಲ್ಲೇ ಸಮೀಪದಲ್ಲಿದ್ದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಅಪಾಯದ ಮುನ್ಸೂಚನೆ ನೀಡಿದರಾದರೂ ಇದನ್ನು ಚಾಲಕ ನಿರ್ಲಕ್ಷಿಸಿದ ಪರಿಣಾಮ ಕಾರು ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿತ್ತು. ಬಳಿಕ ಅಗ್ನಿಶಾಮಕ ದಳ, ಗೃಹ ರಕ್ಷಕ ದಳದ ಸಿಬ್ಬಂದಿಗಳು ಕಾರಿನಲ್ಲ್ಲಿದ್ದ ಪ್ರವಾಸಿಗರನ್ನು ಬೋಟಿನ ಮೂಲಕ ಕರೆತಂದು ರಕ್ಷಿಸಿದರು.

ಜಿಲ್ಲಾಧಿಕಾರಿ ಭೇಟಿ
ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಮಳೆ ಹಾನಿ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ತಿತಿಮತಿ ಬಳಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಸೇತುವೆ, ಸುಂಟಿಕೊಪ್ಪದಲ್ಲಿ ಕುಸಿದಿರುವ ಶಾಲೆ ತಡೆಗೋಡೆ ಸೇರಿದಂತೆ ವಿವಿಧ ಭಾಗಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದರು. ಸಿದ್ದಾಪುರ ಕರಡಿಗೋಡು ಬಳಿ ಕಾವೇರಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಕರಡಿಗೋಡು ಬೆಟ್ಟದ ಕಾಡು ಬಳಿ ಕೆಲವು ಮನೆಗಳಿಗೆ ನದಿ ನೀರು ನುಗ್ಗಿದೆ. ಮನೆಗಳಿಗೆ ನೀರು ನುಗ್ಗಿರುವ ಹಿನ್ನೆಲೆಯಲ್ಲಿ 5-6 ಕುಟುಂಬಗಳು, ತಾತ್ಕಾಲಿಕವಾಗಿ ಬೇರೆ ಕಡೆಗಳಿಗೆ ಸ್ಥಳಾಂತರವಾಗಿದ್ದು, ಕೆಲವು ಮನೆಗಳ ಗೋಡೆಗಳು ಮಳೆಯಿಂದ ಬಿರುಕು ಬಿಟ್ಟ ಬಗ್ಗೆ ವರದಿಯಾಗಿದೆ. ಕರಡಿಗೋಡು ವ್ಯಾಪ್ತಿಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

See also  ಹಾಸನದಲ್ಲಿ ಫೈನಾನ್ಸ್ ಗಳ ವಿರುದ್ಧ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು