News Kannada
Friday, December 09 2022

ಕರ್ನಾಟಕ

ಡಿವೈಡರ್ ಮೇಲೆ ಚಲಿಸಿದ ಕೆಎಸ್‍ಆರ್ ಟಿಸಿ ಬಸ್

Photo Credit :

ಡಿವೈಡರ್ ಮೇಲೆ ಚಲಿಸಿದ ಕೆಎಸ್‍ಆರ್ ಟಿಸಿ ಬಸ್

ಮಡಿಕೇರಿ: ಮಳೆ ತೀವ್ರಗೊಳ್ಳುತ್ತಿರುವಂತೆಯೇ ಮಳೆಯೊಂದಿಗೆ ದಟ್ಟ ಮಂಜು ಕವಿದ ವಾತಾವರಣ ಮಡಿಕೇರಿ ನಗರದಲ್ಲಿದೆ. ಇದೇ ಕಾರಣಕ್ಕೆ ಕೆಎಸ್‍ಆರ್‍ ಟಿಸಿ ಬಸ್‍ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಘಟನೆ ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ನಡೆದಿದೆ.

ಮಡಿಕೇರಿ ಡಿಪೋದಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಕಡೆಗೆ ಬರುತ್ತಿದ್ದ ಬಸ್ ಜನರಲ್ ತಿಮ್ಮಯ್ಯ ವೃತ್ತದ ಬಳಿಯಿರುವ ಬಸ್ ತಂಗುದಾಣದ ಎದುರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ವಿಭಜಕದ ಮೇಲೆಯೇ ಚಲಿಸಿದೆ. ಬಸ್‍ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಬಸ್‍ನ ಮುಂಭಾಗದ ಫ್ರಂಟ್ ಆಕ್ಸಿಲ್ ಕಿತ್ತು ಹೋಗಿದೆ. ಶುಕ್ರವಾರ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಕ್ರೇನ್ ಸಹಾಯದಿಂದ ಬಸ್ಸನ್ನು ರಸ್ತೆ ಬದಿಗೆ ಸರಿಸಲಾಯಿತು.

ಮಡಿಕೇರಿ ನಗರ ಸಂಚಾರಿ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ. ರಸ್ತೆ ವಿಭಜಕದಲ್ಲಿ ಯಾವುದೇ ಪ್ರತಿಫಲಕ ಮತ್ತು ಎಚ್ಚರಿಕೆ ದೀಪ ಇಲ್ಲದಿರುವುದು ಈ ಘಟನೆಗೆ ಕಾರಣವಾಗಿದ್ದು, ಈ ಹಿಂದೆಯೂ ಹಲವು ವಾಹನಗಳು ಈ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ರಸ್ತೆಗೆ ಉರುಳಿದ ಘಟನೆಗಳೂ ನಡೆದಿದೆ. ವಾಹನ ಚಾಲಕರ ಹಿತದೃಷ್ಟಿಯಿಂದ ಸಂಚಾರಿ ಪೊಲೀಸರು ಹಾಗೂ ನಗರಸಭೆ ಸೂಕ್ತ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

See also  ಅಂತರ್ ಜಾತಿ ವಿವಾಹಕ್ಕೆ ಜೋಡಿ ಬಲಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು