News Kannada
Thursday, December 08 2022

ಕರ್ನಾಟಕ

ಗಗನಚುಕ್ಕಿ ಜಲಪಾತದತ್ತ ಪ್ರವಾಸಿಗರ ದೌಡು

Photo Credit :

ಗಗನಚುಕ್ಕಿ ಜಲಪಾತದತ್ತ ಪ್ರವಾಸಿಗರ ದೌಡು

ಮಂಡ್ಯ: ಮಳವಳ್ಳಿ ತಾಲೂಕಿಗೆ ಸೇರುವ ಶಿವನಸಮುದ್ರದ ಬಳಿಯಿರುವ ಗಗನಚುಕ್ಕಿ ಜಲಪಾತ ಭೋರ್ಗರೆದು ಧುಮ್ಮಿಕ್ಕುತ್ತಿದ್ದು ತನ್ನ ರುದ್ರರಮಣೀಯ ಚೆಲುವನ್ನು ನೋಡುಗರ ಮುಂದೆ ತೆರದಿಡುತ್ತಿದ್ದು, ಪ್ರವಾಸಿಗರ ದಂಡು ಇತ್ತ ಸಾಗರೋಪಾದಿಯಲ್ಲಿ ಸಾಗಿ ಬರುತ್ತಿದೆ.

ಒಂದೆಡೆ ಕೇರಳದ ವೈನಾಡು ಮತ್ತೊಂದೆಡೆ ಕೊಡಗಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಕಾರಣ ಕಾವೇರಿ ಮತ್ತು ಕಪಿಲಾ ನದಿ ಧುಮ್ಮಿಕ್ಕಿ ಹರಿಯುತ್ತಿದ್ದು, ತಿ.ನರಸೀಪುರದಲ್ಲಿ ಸಂಗಮವಾಗಿ ಮೈದುಂಬಿ ವಿಶಾಲವಾಗಿ ಹರಿದು ಬಂದು ಗಗನಚುಕ್ಕಿಯಲ್ಲಿ ಭೋರ್ಗರೆದು ಧುಮುಕುತ್ತಿರುವ ಕಾರಣ ಜಲವೈಭವ ಧರೆಗಿಳಿದು ಕಣ್ಮನ ತಣಿಸುತ್ತಿದೆ.

ಕಳೆದ ಕೆಲವು ವರ್ಷಗಳಿಂದ ಮುಂಗಾರು ಕ್ಷೀಣಿಸಿದ ಕಾರಣ ಕಾವೇರಿ ತುಂಬಿ ಹರಿದಿರಲಿಲ್ಲ. ಹೀಗಾಗಿ ಈ ಜಲಪಾತ ಸೊರಗಿ ಹೋಗಿತ್ತು. ಇನ್ನು ಮುಂದೆ ಇದೇ ರೀತಿ ಮಳೆಯಾಗುವುದೇ ಕಡಿಮೆಯಾಗಿದ್ದು, ಹೀಗಾಗಿ ಹಿಂದಿನ ಜಲ ವೈಭವ ಮರು ಕಳಿಸುವುದಿಲ್ಲವೇನೋ ಎಂಬಂತೆ ಜನ ಮಾತನಾಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಮುಂಗಾರು ಆರಂಭದಲ್ಲೇ ಅಬ್ಬರಿಸಿದ ಕಾರಣದಿಂದಾಗಿ ಅದರಲ್ಲೂ ವೈನಾಡಿನಲ್ಲಿ ಭಾರೀ ಮಳೆಯಾದ ಪರಿಣಾಮ ಕಬಿನಿ ಜಲಾಶಯಕ್ಕೆ ನೀರು ಹರಿದು ಬಂದು ಭರ್ತಿಯಾಗಿದ್ದು, ಸುಮಾರು 50 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಟ್ಟ ಹಿನ್ನಲೆಯಲ್ಲಿ ಕಪಿಲೆ ತುಂಬಿ ಹರಿದು ಕಾವೇರಿಯನ್ನು ಸೇರುತ್ತಿರುವುದರಿಂದ ಇದೀಗ ಗಗನಚುಕ್ಕಿ ಜಲಪಾತಕ್ಕೆ ಜೀವ ಕಳೆ ಬಂದಿದ್ದು, ಸೊರಗಿ ಹೋಗಿದ್ದ ಜಲಪಾತ ಮೈಕೈ ತುಂಬಿಕೊಂಡ ಚೆಲುವೆಯಂತೆ ಕಂಗೊಳಿಸುತ್ತಿದೆ.

ಬಹಳಷ್ಟು ವರ್ಷಗಳಿಂದ ಸೊರಗಿದ ಜಲಪಾತವನ್ನು ನೋಡಿದ್ದ ಮಂದಿ ಇದೀಗ ಮೈಕೈ ತುಂಬಿಕೊಂಡು ಧುಮ್ಮಿಕ್ಕುತ್ತಿರುವ ಜಲಪಾತವನ್ನು ನೋಡಿ ಸಂಭ್ರಮಿಸುತ್ತಿದ್ದಾರೆ. ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇದರತ್ತ ಧಾವಿಸುತ್ತಿದ್ದಾರೆ. ಆದರೆ ಇಲ್ಲಿ ಪ್ರವಾಸದ್ಯೋಮ ಇಲಾಖೆಯು ಯಾವುದೇ ಮೂಲ ಭೂತ ಸೌಲಭ್ಯವನ್ನು ಕಲ್ಪಿಸಿಲ್ಲದಿರುವುದು ಪ್ರವಾಸಿಗರಿಗೆ ನಿರಾಸೆಯನ್ನುಂಟು ಮಾಡಿದೆ.

ಇನ್ನು ಕೆಲವರು ಕೇವಲ ಜಲಪಾತದ ವೈಭವನ್ನು ನೋಡಿಕೊಂಡು ಹಿಂತಿರುಗದೆ ನದಿಗಿಳಿದು ಈಜುವ, ಆಟವಾಡುವುದಕ್ಕೆ ಮುಂದಾಗುತ್ತಿರುವುದು ಕಂಡು ಬರುತ್ತಿದೆ. ಇದು ಬಹಳ ಅಪಾಯಕಾರಿಯಾಗಿದೆ. ಕಾರಣ ಇಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಸಾಕಷ್ಟು ನಿದರ್ಶನಗಳಿವೆ. ಹೀಗಾಗಿ ಪ್ರವಾಸಿಗರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಇದನ್ನು ಅರಿತು ಪ್ರವಾಸಿಗರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

See also  ಪ್ರವಾಸಿಗರ ಮೇಲೆ ಹಲ್ಲೆ: ಎಲ್ಲಾ ಆರೋಪಿಗಳ ಬಂಧನಕ್ಕೆ ಎಸ್ಡಿಪಿಐ ಆಗ್ರಹ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು