ಕಾಸರಗೋಡು: ಮಳೆಗಾಲ ಆರಂಭವಾದ ಬಳಿಕ ಜಿಲ್ಲೆಯಲ್ಲಿ 3.88 ಕೋಟಿ ರೂ.ಗಳ ಕೃಷಿ ನಾಶ ಉಂಟಾಗಿದ್ದು, ಮೇ 26ರಿಂದ ಇದುವರೆಗೆ ಆರು ಮಂದಿ ಮೃತಪಟ್ಟಿದ್ದಾರೆ.
241 ಮನೆಗಳು ಹಾನಿಗೊಂಡಿದೆ. 44 ಮನೆಗಳು ಪೂರ್ಣವಾಗಿ ಹಾಗೂ 203 ಮನೆಗಳು ಭಾಗಶಃ ಕುಸಿದಿದೆ. ಮನೆಗಳ ಕುಸಿತದಿಂದ 63, 47, 511 ರೂ. ಗಳ ನಷ್ಟ ಉಂಟಾಗಿದೆ.
ಅಪಾರ ಪ್ರಮಾಣದ ಬೆಳೆ ನಾಶ ಉಂಟಾಗಿದೆ. ಅಡಿಕೆ, ತೆಂಗು, ಬಾಳೆ, ರಬ್ಬರ್ ಹಾಗೂ ಇನ್ನಿತರ ಕೃಷಿ ಹಾನಿ ಉಂಟಾಗಿದ್ದು, ಹಲವು ರಸ್ತೆಗಳು ಕೊಚ್ಚಿ ಹೋಗಿವೆ. ಕಡಲ್ಕೊರೆತಕ್ಕೆ ಅಬ್ಬರಕ್ಕೆ ತೀರವಾಸಿಗಳು ನಲುಗಿದ್ದಾರೆ ಇದುವರೆಗೆ ಜಿಲ್ಲೆಯಲ್ಲಿ 1718.71 ಮಿ. ಮೀ. ಮಳೆಯಾಗಿದೆ.
ಭಾರೀ ಮಳೆಗೆ ಗುರುವಾರ ರಾತ್ರಿ ಮೇಲ್ಪರಂಬ ಕೀಯೂರಿನಲ್ಲಿ ಮನೆಯೊಂದು ಕುಸಿದು ಬಿದ್ದಿದ್ದು, ಶಬ್ದ ಕೇಳಿ ಮನೆಯವರು ಹೊರ ಓಡಿದ್ದರಿಂದ ಭಾರೀ ಅಪಾಯ ತಪ್ಪಿದೆ. ಮುಹಮ್ಮದ್ ಕು೦ಞ ಎಂಬವರ ಮನೆ ಕುಸಿದಿದ್ದು, ಜಿಲ್ಲೆಯ ಹಲವೆಡೆ ಗಾಳಿ ಮಳೆಗೆ ಹಲವು ಮನೆಗಳಿಗೆ ಹಾನಿ ಉಂಟಾಗಿದೆ.