ಕಾಸರಗೋಡು: ಕಾಸರಗೋಡು ನಗರಸಭಾ ವ್ಯಾಪ್ತಿಯ ಹೋಟೆಲ್ ಗಳಿಗೆ ಆರೋಗ್ಯಾಧಿಕಾರಿಗಳು ದಾಳಿ ನಡೆಸಿ ಭಾರೀ ಪ್ರಮಾಣದ ಹಳಸಿದ ಆಹಾರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಒಂದೂ ವಾರಕ್ಕೂ ಅಧಿಕ ಸಮಯದ ಆಹಾರ ವಸ್ತುಗಳು ಪತ್ತೆಯಾಗಿದ್ದು, ಫ್ರಿಡ್ಜ್ ನಲ್ಲಿಟ್ಟು ಬಳಿಕ ಗ್ರಾಹಕರಿಗೆ ನೀಡಲಾಗುತ್ತಿತ್ತು. ನಗರಸಭಾ ವ್ಯಾಪ್ತಿಯ ಸುತ್ತಮುತ್ತಲಿನ ಹೋಟೆಲ್ ಗಳಿಗೆ ಇಂದು ಬೆಳಗ್ಗೆ ಮಧುಸೂದನ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು
ಹೋಟೆಲ್ ಗಳಿಗೆ ನೋಟಿಸ್ ನೀಡಿ ಮುಚ್ಚಿಸಲಾಗಿದ್ದು, ಸ್ವಚ್ಛತೆ ಖಾತರಿಪಡಿಸಿದ ಬಳಿಕ ಹೋಟೆಲ್ ತೆರೆಯಲು ಅನುಮತಿ ನೀಡಲಾಗುವುದು ಎಂದು ನಗರಸಭಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಆರಕ್ಕೂ ಅಧಿಕ ಹೋಟೆಲ್ ಗಳಿಗೆ ದಾಳಿ ನಡೆಸಲಾಗಿದೆ.