News Kannada
Thursday, March 30 2023

ಕರ್ನಾಟಕ

ಕಸಕ್ಕಿಂತಲೂ ಕಡೆಯಾದ ಪಟ್ಟಣ ಪಂಚಾಯಿತಿ ಸಭೆ!

Photo Credit :

ಕಸಕ್ಕಿಂತಲೂ ಕಡೆಯಾದ ಪಟ್ಟಣ ಪಂಚಾಯಿತಿ ಸಭೆ!

ಸೋಮವಾರಪೇಟೆ: ಆಡಳಿತ ಮಂಡಳಿಯ ಕೊನೆಯ ಸಭೆ ಎಂದೇ ಹೇಳಲಾದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ, ಹಾರಾಟ, ಚೀರಾಟ, ಅವಾಚ್ಯ ಶಬ್ದಗಳ ನಿಂದನೆಗಳೊಂದಿಗೆ ಮುಕ್ತಾಯವಾಯಿತು.

ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಪ.ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರಾರಂಭದಿಂದಲೆ ಗದ್ದಲವೇರ್ಪಟ್ಟಿತು. ವಿಪಕ್ಷದ ಕೆ.ಎ.ಆದಂ ಅವರು ಅಧ್ಯಕ್ಷರ ವಿರುದ್ಧ ಆರೋಪಗಳ ಸುರಿಮಳೆಗೈದರೆ, ಅಧ್ಯಕ್ಷೆ ವಿಜಯಲಕ್ಷ್ಮೀ ಹಾಗು ಅವರ ಪತಿ ಬಿ.ಎಂ.ಸುರೇಶ್ ಅವರುಗಳು ಆದಂ ವಿರುದ್ಧ ಕಿಡಿಕಾರಿದರು. ಒಂದು ಹಂತದಲ್ಲಿ ಸುರೇಶ್ ಹಾಗೂ ಆದಂ ಅವರುಗಳು ಏಕವಚನದಲ್ಲೇ ಬೈದಾಡಿಕೊಂಡರು.

ವಿಜಯಲಕ್ಷ್ಮೀ ಅವರ ಅಧಿಕಾರವಧಿಯಲ್ಲಿ ಪಟ್ಟಣದಲ್ಲಿ ಕಸವಿಲೇವಾರಿ ಸಮಸ್ಯೆ ತಲೆದೋರಿದೆ. ಬೀಡಾಡಿ ದನಗಳಿಂದ ವಾಹನ ಚಾಲಕರು ಸಮಸ್ಯೆ ಎದುರಿಸುತ್ತಿದ್ದಾರೆ. ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ. ಇಂದಿರಾ ಕ್ಯಾಂಟಿನ್‍ಗೆ ಕಟ್ಟಡ ನಿರ್ಮಿಸಲು ಮಂದಾಗದೆ ರಾಜಕೀಯ ಮಾಡಲಾಗುತ್ತಿದೆ ಎಂದು ಕೆ.ಎ.ಆದಂ ಆರೋಪಿಸಿದರು.

ವೈಜ್ಞಾನಿಕ ಕಸವಿಲೇವಾರಿಗೆ ಕ್ರಮಕೈಗೊಳ್ಳಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಕಸವಿಲೇವಾರಿ ಘಟಕಕ್ಕೆ ಕಟ್ಟಡ ನಿರ್ಮಿಸಲು, ಯಂತ್ರೋಪಕರಣಗಳನ್ನು ಖರೀಸಲು ಅನುಮತಿ ಸಿಕ್ಕಿದೆ ಎಂದು ಅಧ್ಯಕ್ಷರು ಉತ್ತರಿಸಿದರು.

ಬೀಡಾಡಿ ದನಗಳನ್ನು ದೊಡ್ಡಿಗೆ ಸೇರಿಸಲು ಸಮಸ್ಯೆಯಾಗಿದೆ. ಬೀದಿ ನಾಯಿಗಳ ಹಾವಳಿಯ ನಿಯಂತ್ರಣಕ್ಕೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಬೇಕು ಎಂದು ಮುಖ್ಯಾಧಿಕಾರಿ ನಾಚಪ್ಪ ಹೇಳಿದರು.

ಸಭೆಯಲ್ಲಿ ಸದಸ್ಯರಾದ ಲೀಲಾ ನಿರ್ವಾಣಿ, ಸುಷ್ಮಾ, ಸುಶೀಲಾ, ಶೀಲಾ ಡಿಸೋಜ, ಮೀನಾ ಕುಮಾರಿ, ಈಶ್ವರ್, ಆರೋಗ್ಯಾಧಿಕಾರಿ ಉದಯ ಕುಮಾರ್ ಇದ್ದರು.

See also  ಕೊಡಗಿನಲ್ಲಿ ತಗ್ಗದ ಪ್ರವಾಹ: ನೂರಾರು ಮನೆಗಳು ಮುಳುಗಡೆ; ಪತ್ತೆಯಾಗದ ಮೃತದೇಹಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು