ಕಾಸರಗೋಡು: ಕೇಂದ್ರ ಸರಕಾರದ ರೈತ ವಿರೋಧಿ ನೀತಿಯನ್ನು ಪ್ರತಿಭಟಿಸಿ ರಾಜ್ಯ ರೈತ ಸಂಘ ಆಗಸ್ಟ್ 9ರಂದು ಕಾಸರಗೋಡು ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ಧರಣಿ ಆಯೋಜಿಸಿದ್ದು, ಇದರ ಪೂರ್ವಭಾವಿಯಾಗಿ ವಾಹನ ಪ್ರಚಾರ ಜಾಥಾಕ್ಕೆ ಮಂಜೇಶ್ವರದ ಹೊಸಂಗಡಿಯಿಂದ ಬುಧವಾರ ಸಂಜೆ ಚಾಲನೆ ನೀಡಲಾಯಿತು.
ವಾಹನ ಪ್ರಚಾರ ಜಾಥಾಕ್ಕೆ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ. ವಿ. ಬಾಲಕೃಷ್ಣನ್ ಮಾಸ್ಟರ್ ಅವರು ಜಾಥಾ ನಾಯಕ ಸಿ. ಎಚ್. ಕುಞ೦ಬು ಅವರಿಗೆ ಪಕ್ಷದ ಧ್ವಜವನ್ನು ನೀಡಿ ಚಾಲನೆ ನೀಡಿದರು.
ಜಾಥಾವು ನಾಳೆ ಬೆಳಿಗ್ಗೆ 10 ಗಂಟೆಗೆ ಮಜೀರ್ ಪಳ್ಳದಿಂದ ಹೊರಡಲಿದ್ದು ಬಳಿಕ ಮೀಯಪದವು, ಪೈವಳಿಕೆ ನಗರ, ಉಪ್ಪಳ, ಕುಂಬಳೆ, ಬಾಡೂರು, ಪೆರ್ಲ ಪೇಟೆ, ಬದಿಯಡ್ಕ, ನಾಟೆಕಲ್ಲು ಮೊದಲಾದೆಡೆ ಸಂಚರಿಸಿ ಗಾಡಿಗುಡ್ಡೆಯಲ್ಲಿ ಕೊನೆಗೊಳ್ಳಲಿದೆ.