ಮುಂಡಗೋಡ: ಬುಧವಾರ ಗೆಳೆಯರೊಂದಿಗೆ ಯಲ್ಲಾಪುರದ ಸಾತೋಡಿ ಫಾಲ್ಸ್ ನೋಡಲು ಹೋಗಿ ನೀರುಪಾಲಾಗಿದ್ದ ವಿದ್ಯಾರ್ಥಿ ಯುಸೂಫ್(19) ಮೃತ ದೇಹ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ.
ಬುಧವಾರ ಮುಂಡಗೋಡ ತಾಲೂಕಿನಿಂದ 14 ಜನ ಸ್ನೇಹಿತರು ಸಾತೋಡಿ ಪ್ರವಾಸಕ್ಕೆ ತೆರಳಿ, ಅಲ್ಲಿ ಕಾಲುಜಾರಿ ಬಿದ್ದಿದ್ದಾನೆ. ಆ ಬಳಿಕ ನಾಪತ್ತೆಯಾಗಿದ್ದಾನೆ.
ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ, ಹಾಗೂ ಸ್ಥಳೀಯ ಮುಳುಗು ತಜ್ಞರು, ಮೀನುಗಾರರ ಸತತ ಕಾರ್ಯಚರಣೆ ನಡೆಸಿದ್ದು ಇಂದು ಜಲಪಾತದ ಕಲ್ಲು ಬಂಡೆಗಳ ನಡುವೆ ಆತನ ಶವ ಪತ್ತೆಯಾಗಿದೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.