News Kannada
Monday, November 28 2022

ಕರ್ನಾಟಕ

ಕೊಡಗಿನಲ್ಲಿ ತಗ್ಗಿದ ಮಳೆ: ಮುಕ್ಕೋಡ್ಲು ಗ್ರಾಮದಲ್ಲಿ 2 ಮೃತದೇಹ ಪತ್ತೆ - 1 min read

Photo Credit :

ಕೊಡಗಿನಲ್ಲಿ ತಗ್ಗಿದ ಮಳೆ: ಮುಕ್ಕೋಡ್ಲು ಗ್ರಾಮದಲ್ಲಿ 2 ಮೃತದೇಹ ಪತ್ತೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವರುಣನ ಅಬ್ಬರ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದರೂ, ಮಡಿಕೇರಿ ತಾಲೂಕು ಸುತ್ತಮುತ್ತಲ ಪ್ರದೇಶಗಳಲ್ಲಿ ಸೋಮವಾರವೂ ಮಳೆಯಾಗಿದೆ. ಬಿಡುವು ನೀಡಿ ಸಾಧಾರಣ ಮಳೆಯಾಗುತ್ತಿರುವುದರಿಂದ ಜನತೆ ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತ್ತಾಗಿದೆ.

ಆದರೆ ಹಾನಿಯ ಪ್ರಮಾಣ ಏರಿಕೆಯಾಗುತ್ತಲೇ ಇದ್ದು, ಭೂಕುಸಿತ ಹಾಗೂ ಪ್ರವಾಹದಿಂದ ಸಂತ್ರಸ್ತರಾಗಿರುವವರ ರಕ್ಷಣಾ ಕಾರ್ಯ ಸೋಮವಾರವೂ ಮುಂದುವರಿದಿದೆ. ಮುಕ್ಕೋಡ್ಲು ಗ್ರಾಮದಲ್ಲಿ ತಾಯಿ-ಮಗನ ಮೃತದೇಹ ಕ್ವಾರೆಯಲ್ಲಿ ಪತ್ತೆಯಾಗಿದೆ.

ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಎನ್‍ಡಿಆರ್ ಎಫ್ ಸಿಬ್ಬಂದಿಗಳು ಸೋಮವಾರ ಮುಕ್ಕೋಡ್ಲು ಗ್ರಾಮದಲ್ಲಿ ನಿರಾಶ್ರಿತರಿಗಾಗಿ ಶೋಧ ನಡೆಸುತ್ತಿದ್ದ ಸಂದರ್ಭ ಗ್ರಾಮದ ನಿವಾಸಿಗಳಾದ ಲೀಲಾವತಿ ಹಾಗೂ ಅವರ ಪುತ್ರ ಉಮೇಶ್ ಎಂಬವರುಗಳ ಮೃತದೇಹ ಗ್ರಾಮದ ಕ್ವಾರೆಯೊಂದರಲ್ಲಿ ಪತ್ತೆಯಾಗಿದೆ. ಇವರುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಕ್ವಾರೆಗೆ ಬಿದ್ದಿದ್ದಾರೆಯೇ ಅಥವಾ ಜೀವ ರಕ್ಷಣೆಗಾಗಿ ಓಡುವ ಸಂದರ್ಭ ಕ್ವಾರೆಗೆ ಬಿದ್ದು ಸಾವಿಗೀಡಾಗಿದ್ದಾರೆಯೇ ಎಂಬುದು ದೃಢಪಟ್ಟಿಲ್ಲ.

ಕಳ್ಳರ ಭಯ
ಈ ನಡುವೆ ಜೀವ ಭಯದಿಂದ ಮನೆ ತೊರೆದು ಪರಿಹಾರ ಶಿಬಿರಗಳಲ್ಲಿ ನೆಲೆಸಿರುವವರ ಮನೆಗಳಿಗೆ ಕಳ್ಳರು ನುಗ್ಗಿರುವ ಪ್ರಕರಣವೂ ವರದಿಯಾಗಿದ್ದು, ಮಡಿಕೇರಿ ತಾಲೂಕಿನ ಜೋಡುಪಾಲ ಗ್ರಾಮದ ಕೆಲವು ಮನೆಗಳ ಹೆಂಚು ತೆಗೆದು ಒಳನುಗ್ಗಿ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಭಾಗಕ್ಕೆ ದಕ್ಷಿಣ ಕನ್ನಡದಿಂದ ಸಂಪಾಜೆ ಮೂಲಕ ಮಾತ್ರ ಆಗಮಿಸಲು ಅವಕಾಶವಿರುವುದರಿಂದ ಇದೀಗ ಸಂಪಾಜೆ ಗೇಟ್ ಮೂಲಕ ಬರುವ ಎಲ್ಲಾ ವಾಹನಗಳನ್ನು ತಡೆದು ತಪಾಸಣೆ ನಡೆಸಲಾಗುತ್ತಿದೆ.

ಮಹಾಮಳೆಯಿಂದ ಹಾನಿಗೀಡಾಗಿರುವ ಮಡಿಕೇರಿ ನಗರದ ಚಾಮುಂಡೇಶ್ವರಿ ನಗರ ಹಾಗೂ ಇಂದಿರಾ ನಗರ ಬಡಾವಣೆಗಳು ನಿರ್ಜನವಾಗಿರುವುದರಿಂದ ಚೋರರು ಮನೆಗಳಿಗೆ ನುಗ್ಗಲು ಆರಂಭಿಸಿದ್ದಾರೆ. ಕೆಲವು ಮನೆಗಳ ಟಿವಿ ಹಾಗೂ ಅಡುಗೆ ಅನಿಲದ ಸಿಲಿಂಡರ್‍ಗಳು ಕಳ್ಳತನವಾಗಿವೆ.

ಮುರಿದ ತೂಗುಸೇತುವೆ
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ 20 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ, ಕೂಡಿಗೆ ಸಮೀಪದ ಶ್ರೀ ರಾಮಲಿಂಗೇಶ್ವರ ದೇವಾಲಯದ ಬಳಿ ಕಾವೇರಿ ನದಿಗೆ ಅಡ್ಡಲಾಗಿ 6 ವರ್ಷಗಳ ಹಿಂದೆ ನಿರ್ಮಿಸಿದ್ದ ತೂಗು ಸೇತುವೆ ನೀರು ಪಾಲಾಗಿದೆ.

ಹಾರಂಗಿ-ಕಾವೇರಿ ನದಿಯ ಸಂಗಮದಲ್ಲಿ ನೀರು ಹರಿಯುವ ರಭಸ ಹೆಚ್ಚಾಗಿ ಸೇತುವೆಯ ಮೇಲ್ಭಾಗದಲ್ಲೂ ಹರಿದ ಪರಿಣಾಮ ಎರಡೂ ತುದಿಗಳ ಮೆಟ್ಟಿಲುಗಳು ಮತ್ತು ಅದಕ್ಕಳವಡಿಸಿದ್ದ ಬೃಹತ್ ಗಾತ್ರದ ಹಗ್ಗಗಳು ತುಂಡಾಗಿವೆ. ಸೇತುವೆಯ ಒಂದು ಭಾಗ ತುಂಡಾಗಿ ಇನ್ನುಳಿದ ತೂಗುಸೇತುವೆ ಭಾಗ ಮುರಿದ ಕಬ್ಬಿಣದ ಸಲಾಕೆಯಂತಾಗಿದೆ.

ನಾಲ್ಕು ಮನೆಗಳು ನೆಲಸಮ
ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾವೇರಿ ಬಡಾವಣೆಯಲ್ಲಿನ ಎರಡು ಮನೆಗಳು ನೀರಿನಿಂದ ಜಲಾವೃತಗೊಂಡ ಪರಿಣಾಮ ನೆಲಸಮಗೊಂಡಿವೆ. ಅದೇ ರೀತಿಯಲ್ಲಿ ಸೀಗೆಹೊಸೂರು ಮತ್ತು ಸೀತಾ ಕಾಲೋನಿಯಲ್ಲಿಯೂ ಎರಡು ಮನೆಗಳೂ ಕುಸಿದಿವೆ.

See also  ಹುಣಸೂರಿನ ರೈತ ಆತ್ಮಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು