ಮಡಿಕೇರಿ: ಇಂದು ಮದುವೆಗೆ ಸಿದ್ಧತೆ ನಡೆಸಿದ ಕುಟುಂಬವೊಂದು ಕಳೆದ ಕೆಲವು ದಿನಗಳಿಂದ ಸುರಿದ ಮಳೆಯ ಅರ್ಭಟಕ್ಕೆ ಮನೆ ಕಳೆದುಕೊಂಡ ನಿರ್ಗತರಾಗಿದ್ದರು.
ಭೂಕುಸಿತದಿಂದ ಮನೆ ಹಾಗೂ ಚಿನ್ನಾಭರಣ ಕಳೆದುಕೊಂಡು ಮದುವೆ ದಿನಾಂಕ ಮುಂದೂಡಲು ನಿರ್ಧರಿಸಿದ್ದರು. ಇದೀಘ ಅಲ್ಲಿನ ಸಂಘ ಸಂಸ್ಥೆಗಳು ಆಸರೆಯಾಗಿದ್ದು, ಆರ್.ಮಂಜುಳಾ ಅವರು ಕೇರಳದ ಕಣ್ಣೂರಿನ ರಜೀಶ್ ಅವರೊಂದಿಗೆ ಸಪ್ತತುಳಿದರು. ಇವರ ಮದುವೆ ಮಡಿಕೇರಿ ಓಂಕಾರ ದೇವಸ್ಥಾನದಲ್ಲಿ ನಡೆಯಿತು.
ಸೇವಾಭಾರತಿ ಹಾಗೂ ಲಯನ್ಸ್ ಕ್ಲಬ್ ಸದಸ್ಯರ ಆಶ್ರಯದಲ್ಲಿ ಮದುವೆ ನೆರವೇರಿತು.