ಕಾಸರಗೋಡು: ಸಿಪಿಎಂ ಕಾರ್ಯಕರ್ತ ಮಾಂಗಾಡ್ ನ ಎಂ. ಬಿ ಬಾಲಕೃಷ್ಣ (45) ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ಕಾಸರಗೋಡು ಜಿಲ್ಲಾ ನ್ಯಾಯಾಲಯ ತೀರ್ಫು ನೀಡಿದೆ.
ಆರೋಪಿಗಳಾದ ಮಾಂಗಾಡ್ ಆರ್ಯಡ್ಕದ ಎ. ಕೆ. ರಂಜಿತ್ (34), ಎ. ಸುರೇಶ್ (29), ಉದುಮದ ಯು. ಶ್ರೀ ಜಯನ್ (42 ), ಆರಿಯಡ್ಕದ ಶ್ಯಾಮ್ ಮೋಹನ್ ( 29), ಮಜೀದ್ ಹಾಗೂ ಶಿಬು ಕಡವ೦ಗಾನ ಎಂಬವರನ್ನು ಖುಲಾಸೆಗೊಳಿಸಿದೆ.
ಆರೋಪ ಸಾಬೀತುಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಪ್ರಕರಣದ ಪ್ರಥಮ ಆರೋಪಿ ಮಾಂಗಾಡ್ ಆರ್ಯಡ್ಕದ ಪ್ರಜಿತ್ (28) ಕೆಲ ತಿಂಗಳ ಹಿಂದೆ ಬಾವಿಗೆ ಬಿದ್ದು ಮೃತಪಟ್ಟಿದ್ದನು.
2013ರ ಸೆ. 16ರಂದು ಓಣಂ ದಿನದಂದು ರಾತ್ರಿ ಘಟನೆ ನಡೆದಿತ್ತು. ಸ್ಕೂಟರ್ ನಲ್ಲಿ ಮನೆಗೆ ಮರಳುತ್ತಿದ್ದ ಬಾಲಕೃಷ್ಣರನ್ನು ತಡೆದ ತಂಡವು ಇರಿದು ಕೊಲೆಗೈದಿತ್ತು.