News Kannada
Friday, December 09 2022

ಕರ್ನಾಟಕ

ಪ್ರತಾಪ್ ಸಿಂಹರನ್ನು ಗೆಲ್ಲಿಸಿದ್ದೆ ಕೊಡಗಿನ ದುರಂತ: ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ಗರಂ

Photo Credit :

ಪ್ರತಾಪ್ ಸಿಂಹರನ್ನು ಗೆಲ್ಲಿಸಿದ್ದೆ ಕೊಡಗಿನ ದುರಂತ: ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ಗರಂ

ಮಡಿಕೇರಿ: ಕೊಡಗಿನ ಅತಿವೃಷ್ಟಿ ಹಾನಿ ಪ್ರದೇಶಗಳ ವೀಕ್ಷಣೆಗೆಂದು ಆಗಮಿಸಿರುವ ಕೇಂದ್ರದ ಅಧ್ಯಯನ ತಂಡಕ್ಕೆ ಸಂಸದ ಪ್ರತಾಪ್ ಸಿಂಹ ಅವರು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಜಿಲ್ಲೆಯ ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ಹೆಬ್ಬೆಟ್ಟಗೇರಿ ಬಳಿ ನಡೆದಿದೆ.

ಭೂ ಪರಿವರ್ತನೆ ಕುರಿತು ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದೀರಿ, ನೀವು ನಮ್ಮ ಪಕ್ಷದ ಎಂಪಿ, ಜನರ ಜೊತೆ ಚರ್ಚೆ ಮಾಡಿ ಮಾತನಾಡಬೇಕಾಗಿತ್ತು. ಎಲ್ಲರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿದ್ದೀರ, ಜನಪ್ರತಿನಿಧಿಗಳು ಜನಪ್ರತಿನಿಧಿಗಳಾಗಿ ಇರಬೇಕು ಹೊರತು ಜನರಿಗೆ ತೊಂದರೆ ನೀಡಬಾರದೆಂದು ಎಂ.ಬಿ.ದೇವಯ್ಯ ಗುಡುಗಿದರು. ಈ ಪಕ್ಷ ಕ್ರಮ ಕೈಗೊಳ್ಳಲು ಮುಂದಾದರೆ ಎದುರಿಸಲು ಸಿದ್ಧನಿದ್ದೇನೆ, ನಿಮ್ಮನ್ನು ನಂಬಿಕೊಂಡು ನಾನು ಪಕ್ಷದಲ್ಲಿಲ್ಲ, ನಿಮ್ಮನ್ನು ಗೆಲ್ಲಿಸಿ ಕಳುಹಿಸಿದ್ದೇ ಕೊಡಗಿನ ದುರಂತ ಎಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು.

ಇದರಿಂದ ವಿಚಲಿತರಾದ ಪ್ರತಾಪ್ ಸಿಂಹ ಜೀಪು ಏರಿ ಕುಳಿತರು. ಶಾಸಕ ಅಪ್ಪಚ್ಚು ರಂಜನ್ ಸೇರಿದಂತೆ ಅಲ್ಲಿದ್ದವರು ಸಮಾಧಾನ ಪಡಿಸಲು ಯತ್ನಿಸಿದರೂ ದೇವಯ್ಯ ಅವರು ಮಾತ್ರ ಪ್ರತಾಪ್ ಸಿಂಹ ಅವರ ವಿರುದ್ಧ ಏರಿದ ಧ್ವನಿಯಲ್ಲೇ ಮಾತನಾಡಿದರು.

ಫೇಸ್ ಬುಕ್‍ನಲ್ಲಿ ಕೌಂಟರ್: ತಮ್ಮ ವಿರುದ್ಧ ಎಂ.ಬಿ.ದೇವಯ್ಯ ಅವರು ತಿರುಗಿ ಬಿದ್ದ ದೃಶ್ಯ ವೈರಲ್ ಆಗುವುದರೊಂದಿಗೆ ಭಾರೀ ಸುದ್ದಿಯಾಗುತ್ತಿದ್ದಂತೆ ಸಂಸದ ಪ್ರತಾಪ್ ಸಿಂಹ ಫೇಸ್‍ಬುಕ್ ಮೂಲಕ ಕೌಂಟರ್ ಕೊಡುವುದರೊಂದಿಗೆ ಮಾಧ್ಯಮದವರಿಗೆ ಬುದ್ಧಿ ಮಾತೂ ಹೇಳಿದ್ದಾರೆ.

ಹೊರಗಿನಿಂದ ಕೊಡಗು ಜಿಲ್ಲೆಗೆ ಬಂದವರು ನೂರಾರು ಎಕರೆ ಭೂಪರಿವರ್ತನೆ ಮಾಡಿಕೊಂಡು ರೆಸಾರ್ಟ್, ಹೋಂಸ್ಟೇಯಂತಹ ದೊಡ್ಡ ದೊಡ್ಡ ವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ಹೇಳಿದೇನಷ್ಟೇ. ಆದರೆ ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಆ ವ್ಯಕ್ತಿ ಏನೇನೋ ಮಾತನಾಡಿದ್ದಾರೆ. ನನಗೂ ಮಾತನಾಡಲು ಬರುತ್ತದೆ, ಆದರೆ ವಯೋವೃದ್ಧರು ಎನ್ನುವ ಕಾರಣಕ್ಕೆ ಸುಮ್ಮನಿದ್ದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಮುಂದುವರೆದು ಮಾತನಾಡಿ ಮಾಧ್ಯಮಗಳು ಇದನ್ನೇ ದೊಡ್ಡ ಸುದ್ದಿಯನ್ನಾಗಿ ಮಾಡಿದ್ದು ಸರಿಯಲ್ಲ. ನಾನು ಪ್ರಸಾರ ಮಾಡದಂತೆ ಮನವಿ ಮಾಡಿಕೊಂಡಿದ್ದರೂ ಸುದ್ದಿ ಪ್ರಸಾರವಾಯಿತು. ಈ ಹಿಂದೆ ಮಳೆಹಾನಿ ಸಂತ್ರಸ್ತರು ಮಾಧ್ಯಮದವರ ವಿರುದ್ಧ ತಿರುಗಿ ಬಿದ್ದಿದ್ದರು, ಅದನ್ನು ಯಾಕೆ ಪ್ರಸಾರ ಮಾಡಲಿಲ್ಲ ಎಂದು ಪ್ರತಾಪ್ ಸಿಂಹ ಫೇಸ್ ಬುಕ್‍ನಲ್ಲಿ ಪ್ರಶ್ನಿಸಿದ್ದಾರೆ. ನಾನು ಸಂಸದನಾಗಿ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿದ್ದೇನೆ ಎಂದು ಕೂಡ ಹೇಳಿಕೊಂಡಿದ್ದಾರೆ.

See also  ಹೆಚ್.ಡಿ.ಕೋಟೆಯಲ್ಲಿ ಮತ ಕೇಳಲು ಬಂದ ಶಾಸಕರಿಗೆ ಘೇರಾವ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು