News Kannada
Thursday, October 06 2022

ಕರ್ನಾಟಕ

ಇ-ಫಾರ್ಮಸಿ ವಿರೋಧಿಸಿ ಕೊಡಗಿನಲ್ಲೂ ಔಷಧಿ ಅಂಗಡಿಗಳು ಬಂದ್ - 1 min read

Photo Credit :

ಇ-ಫಾರ್ಮಸಿ ವಿರೋಧಿಸಿ ಕೊಡಗಿನಲ್ಲೂ ಔಷಧಿ ಅಂಗಡಿಗಳು ಬಂದ್

ಮಡಿಕೇರಿ: ಔಷಧಿಗಳ ವಿತರಣಾ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಇ-ಫಾರ್ಮಸಿ ವ್ಯವಸ್ಥೆಯಲ್ಲಿ ಕಂಡು ಬಂದಿರುವ ಲೋಪಗಳನ್ನು ಸರಿಪಡಿಸುವಂತೆ ಆಗ್ರಹಿಸಿ ದೇಶವ್ಯಾಪಿ ನಡೆದ ಔಷಧಿ ವ್ಯಾಪಾರಿಗಳ ಬಂದ್ ಮುಷ್ಕರಕ್ಕೆ ಕೊಡಗು ಜಿಲ್ಲೆಯಲ್ಲೂ ಬೆಂಬಲ ವ್ಯಕ್ತವಾಯಿತು.

ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ ತನ್ನ ಬೆಂಬಲವನ್ನು ವ್ಯಕ್ತಪಡಿಸಿ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಸರಕಾರದ ಗಮನ ಸೆಳೆಯಿತು. ಜಿಲ್ಲೆಯಲ್ಲಿರುವ ಸುಮಾರು 120 ಔಷಧಿ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು. ಜಿಲ್ಲಾಡಳಿತದ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ ಸಂಘದ ಜಿಲ್ಲಾ ಪ್ರಮುಖರು ಇ-ಫಾರ್ಮಸಿ ಎಂಬ ವಿತರಣಾ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಗ್ರಾಹಕರ ಹಿತಾಸಕ್ತಿಯನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು.

ಹೊಸ ನೀತಿಯ ಬಗ್ಗೆ ಗ್ರಾಹಕರಿಗೆ ವಾಸ್ತವಾಂಶ ತಿಳಿಸಬೇಕಾದ ಮಹತ್ವದ ಹೊಣೆಗಾರಿಕೆ ಔಷಧಿ ವ್ಯಾಪಾರಸ್ಥರ ಮೇಲಿರುವುದರಿಂದ ಮುಷ್ಕರ ನಡೆಸಲಾಗಿದೆ ಎಂದರು. ನಕಲಿ ಹಾಗೂ ಮಾದಕ ಔಷಧಗಳ ವ್ಯಾಪಾರ ಇತಿಮಿತಿಯಿಲ್ಲದಂತೆ ನಡೆಯಲು ನೂತನ ವ್ಯವಸ್ಥೆ ರಹದಾರಿಯಾಗಿದ್ದು, ಬೇರೆ ಔಷಧದ ಹೆಸರಿನಲ್ಲಿ ಮಾದಕ ಜೌಷಧ ವಿತರಣೆಯಾದಲ್ಲಿ ಯುವ ಪೀಳಿಗೆ ಬಲಿಪಶುಗಳಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಇ-ಫಾರ್ಮಸಿ ವ್ಯವಸ್ಥೆ ರೋಗಿಯ ಆರೋಗ್ಯದ ಬಗ್ಗೆ, ವಿತರಣೆ ಆಗಬೇಕಾದ ಔಷಧದ ಗುಣಮಟ್ಟದ ಪರಿಶೀಲನೆಗೆ ಒತ್ತು ನೀಡದೆ ಗ್ರಾಹಕರ ಜೀವನದ ಜೊತೆ ಆಟವಾಡುವ ಪ್ರಕ್ರಿಯೆಯಾಗಿದೆ. ವಿತರಕ ಯಾರು ಎಂಬುವುದನ್ನೇ ಅರಿಯದೇ, ಔಷಧಿಯ ವಿಷಯವನ್ನೇ ತಿಳಿಯದವರು ಇ-ಫಾರ್ಮಸಿ ವ್ಯವಸ್ಥೆಯಡಿ ಔಷಧಿಗಳನ್ನು ಎಲ್ಲಿಂದಲೋ ವಿತರಣೆ ಮಾಡಿದಲ್ಲಿ ಗ್ರಾಹಕನ ಆರೋಗ್ಯ ಸಂಪೂರ್ಣ ಹದಗೆಡುವ ಸಾಧ್ಯತೆ ಹೆಚ್ಚಿದೆ.

ಡಾಕ್ಟರ್‍ ಔಷಧ ಚೀಟಿಯನ್ನು ಇ-ಫಾರ್ಮಸಿ ಪೋರ್ಟಲ್‍ಗೆ ತಾವೇ ತುಂಬಬೇಕಾಗಿದ್ದು, ತಮಗೆ ತಲುಪಬಹುದಾದ ಜೌಷಧವು, ತಮಗೆ ವೈದ್ಯರ ಸಲಹೆಯಂತೆಯೇ ದೊರೆಯುವುದೆಂಬ ಖಾತ್ರಿ ಇಲ್ಲ. ಜೌಷಧವನ್ನು ಸ್ವ ಹಸ್ತದಿಂದ ತಲುಪಿಸಬೇಕಾದ ನಿಯಮ ಇ-ಫಾರ್ಮಸಿಗೆ ಅನ್ವಯವಾಗಿಲ್ಲ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟರು.

ಸಂಘದ ಖಜಾಂಚಿ ಪ್ರಸಾದ್ ಗೌಡ, ಜಂಟಿ ಕಾರ್ಯದರ್ಶಿ ಬಿ.ಸಿ.ತಿಲಕ್, ಮಾಜಿ ಕಾರ್ಯದರ್ಶಿ ವಸಂತ್ ಕುಮಾರ್ ಹಾಗೂ ಮತ್ತಿತರ ಪ್ರಮುಖರು ಮನವಿ ನೀಡುವ ಸಂದರ್ಭ ಹಾಜರಿದ್ದರು.

See also  ಸಾರಿಗೆ ಸಚಿವ ಲಕ್ಷ್ಮಣ ಸವದಿ ತವರು ಜಿಲ್ಲೆಯಲ್ಲೇ ಸಾರಿಗೆ ನೌಕರ ಮನೆಯಲ್ಲಿ ನೇಣಿಗೆ ಶರಣು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು