News Kannada
Friday, September 30 2022

ಕರ್ನಾಟಕ

ಮರಗೋಡು ತಿಲಕ್ ರಾಜ್ ಹತ್ಯೆ ಪ್ರಕರಣ: ಆರೋಪಿ ನಂದಾ ನಾಣಯ್ಯ ಬಂಧನ - 1 min read

Photo Credit :

ಮರಗೋಡು ತಿಲಕ್ ರಾಜ್ ಹತ್ಯೆ ಪ್ರಕರಣ: ಆರೋಪಿ ನಂದಾ ನಾಣಯ್ಯ ಬಂಧನ

ಕಾನಡ್ಕ ತಿಲಕ್‍ರಾಜ್ ಅವರನ್ನು ಗುಂಡಿಕ್ಕಿ ಕೊಲೆಗೈದ ಬಳಿಕ ತಲೆ ಮರೆಸಿಕೊಳ್ಳಲು ಯತ್ನಿಸಿದ ಆರೋಪಿ ಮುಂಡೋಡಿ ನಂದ ನಾಣಯ್ಯ ಅವರನ್ನು ಘಟನೆ ನಡೆದ 6 ಗಂಟೆಗಳ ಒಳಗಾಗಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ತಿಲಕ್‍ರಾಜ್ ಅವರನ್ನು ಹತ್ಯೆ ಮಾಡಿದ ಬಳಿಕ ಕೃತ್ಯಕ್ಕೆ ಬಳಸಿದ್ದ ಡಸ್ಟರ್ ವಾಹನವನ್ನು ಮನೆಯಲ್ಲಿ ನಿಲ್ಲಿಸಿ ತನ್ನ ಬೈಕ್‍ನಲ್ಲಿ ಆಯುಧ ಮತ್ತು ಸಜೀವ ಗುಂಡುಗಳೊಂದಿಗೆ ತಪ್ಪಿಸಿಕೊಳ್ಳಲು ನಂದ ನಾಣಯ್ಯ ಪ್ರಯತ್ನಿಸಿದ್ದರು.

ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಂತೆ ಮಡಿಕೇರಿ ಡಿವೈಎಸ್‍ಪಿ ಸುಂದರರಾಜ್ ಹಾಗೂ ಡಿಸಿಐಬಿ ಇನ್ಸ್‍ಪೆಕ್ಟರ್ ಮಹೇಶ್ ಅವರ ನೇತೃತ್ವದಲ್ಲಿ ಆರೋಪಿಯ ಪತ್ತೆಗಾಗಿ ಎರಡು ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು.

ಕೊಲೆ ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿದ ಡಿವೈಎಸ್‍ಪಿ ಸುಂದರರಾಜ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ರಿವಾಲ್ವರ್, ಸಜೀವ ಗುಂಡುಗಳು, ಒಂದು ಡಸ್ಟರ್ ವಾಹನ ಮತ್ತು ಒಂದು ಮೋಟಾರ್ ಬೈಕ್‍ನ್ನು ವಶಪಡಿಸಿಕೊಳ್ಳಲಾಗಿದೆ.

ಮಡಿಕೇರಿ ಗ್ರಾಮಾಂತರ ಪ್ರಭಾರ ವೃತ್ತ ನಿರೀಕ್ಷಕ ಎಂ.ಎಂ.ಭರತ್, ಉಪ ನಿರೀಕ್ಷಕ ಚೇತನ್, ಎಎಸ್‍ಐ ರಾಜು. ಸಿಬ್ಬಂದಿಗಳಾದ ಕಿರಣ್, ಇಬ್ರಾಹಿಂ, ಸತೀಶ್‍ಮ ಹನೀಫ್, ಶಿವರಾಜೇಗೌಡ ಹಾಗೂ ಚಾಲಕರುಗಳಾದ ಮೋಹನ್ ಮತ್ತು ಅರುಣ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇವರ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಶ್ಲಾಘಿಸಿದ್ದಾರೆ.

 

See also  ಬೆಂಕಿಯ ಕಿಡಿಗೆ ಗುಡಿಸಲು, ಟ್ರಾಕ್ಟರ್ ಸುಟ್ಟು ಭಸ್ಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು