News Kannada
Saturday, September 24 2022

ಕರ್ನಾಟಕ

ಸಾಲಮನ್ನಾದಿಂದ ಆಡಳಿತದ ಮೇಲೆ ಪರಿಣಾಮ: ಸಿಎಂ ಕುಮಾರಸ್ವಾಮಿ - 1 min read

Photo Credit :

ಸಾಲಮನ್ನಾದಿಂದ ಆಡಳಿತದ ಮೇಲೆ ಪರಿಣಾಮ: ಸಿಎಂ ಕುಮಾರಸ್ವಾಮಿ

ರಾಮನಗರ: ರಾಜ್ಯದಲ್ಲಿ 45 ಸಾವಿರ ಕೋಟಿ ರೈತರ ಸಾಲಮನ್ನ ಮಾಡಿರುವುದರಿಂದ ಆಡಳಿತದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ, ಆರ್ಥಿಕ ಸಚಿವನಾಗಿಯೂ ತಾವು ಕಾರ್ಯ ನಿರ್ವಹಿಸುತ್ತಿರುವುದರಿಂದ ಬ್ಯಾಲೆನ್ಸ್ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ತಾಲೂಕಿನ ಬಿಡದಿ ಸಮೀಪದ ಕೇತುಗಾನಹಳ್ಳಿಯ ತಮ್ಮ ತೋಟದ ಮನೆ ಆವರಣದಲ್ಲಿ ನಡೆದ ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ 44 ಲಕ್ಷ ಕುಟುಂಬಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ರೈತರನ್ನು ಸಂಕಷ್ಟದಿಂದ ಪಾರು ಮಾಡುವ ದೃಷ್ಟಿಯಿಂದ ದೃಢ ನಿರ್ಧಾರ ತೆಗೆದುಕೊಳ್ಳಲಾಯಿತು, ಒಂದು ಕಡೆ ಕಾರ್ಯಭಾರ ಮತ್ತೊಂದು ಕಡೆ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಕಾರ ಮುನ್ನೆಡೆಸುವ ಒತ್ತಡ ತಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿದೆ, ಆಡಳಿತದ ಒತ್ತಡದಲ್ಲಿ ಕಾರ್ಯಕರ್ತರ ನಿರೀಕ್ಷೆಗೆ ತಕ್ಕಂತೆ ಸ್ಪಂದನೆ ಮಾಡಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ಕಾರ್ಯಕರ್ತರ ಕುಂದು ಕೊರತೆಗಳನ್ನು ಆಲಿಸಲು ಇಂದು ಸಭೆ ಕರೆಯಲಾಗಿದೆ, ಹೊರತು ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆಯ ಸಭೆಯಲ್ಲ ಎಂದು ಸ್ಪಷ್ಟಪಡಿಸಿದರು.

ಕಾರ್ಯಕರ್ತರಿಗೆ ಸೂಕ್ತ ರೀತಿಯಲ್ಲಿ ಸ್ಪಂದನೆ ದೊರೆಯದಿದ್ದರೂ ಸಹ ಅಭಿವೃದ್ಧಿಯನ್ನು ತಾವು ಕಡೆಗಣಿಸಿಲ್ಲ, ಈಗಾಗಲೇ ಹಲವಾರು ಯೋಜನೆಗಳಿಗೆ ಚಾಲನೆ ನೀಡಲಾಗಿದೆ, ಭೈರಮಂಗಲ ಕೆರೆಯಿಂದ ಹೊರಬರುತ್ತಿರುವ ನೊರೆಯಿಂದ ಹಾಗೂ ಕಲುಷಿತ ನೀರಿನಿಂದ ಕೃಷಿ ಚಟುವಟಿಕೆಗೆ ಸಮಸ್ಯೆಯಾಗುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ, ಅಲ್ಲಿ ಶುದ್ಧೀಕರಣ ಘಟಕ ಸ್ಥಾಪಿಸಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶೀಘ್ರವೇ ಚಾಲನೆ ದೊರೆಯಲಿದೆ.

ಶಿಂಷಾ ನದಿಯಿಂದ ಚನ್ನಪಟ್ಟಣ ಮತ್ತು ರಾಮನಗರಕ್ಕೆ ಕುಡಿಯುವ ನೀರು ಹರಿಸುವ 450 ಕೋಟಿ ವೆಚ್ಚದ ಯೋಜನೆಗೆ ಚಾಲನೆ ನೀಡಲಾಗಿದೆ, ಹಾಗೆಯೇ ಎರಡೂ ನಗರ ವ್ಯಾಪ್ತಿಯಲ್ಲಿ ತಲಾ 5 ಸಾವಿರ ಮನೆಗಳನ್ನು ನಿರ್ಮಿಸಿ ಜನರಿಗೆ ವಸತಿ ರಹಿತರಿಗೆ ವಿತರಿಸಲು 250 ಕೋಟಿ ರೂಗಳನ್ನು ನಿಗದಿ ಮಾಡಲಾಗಿದೆ, ರಾಜೀವ್ ಗಾಂಧಿ ಆರೋಗ್ಯ ವಿವಿ ಕಾಮಗಾರಿ, ಅರ್ಕಾವತಿ ನದಿ ಶುದ್ಧೀಕರಣ ಸೇರಿದಂತೆ ಇನ್ನಿತರ ಯೋಜನೆಗಳು ಸಧ್ಯದಲ್ಲಿಯೇ ಆರಂಭವಾಗಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿನ ಆಡಳಿತಾರೂಢ ಮೈತ್ರಿ ಸರಕಾರ 5 ವರ್ಷಗಳನ್ನು ಪೂರೈಸಲಿದೆ, ಈಗಲೋ ಆಗಲೋ ಬೀಳಲಿದೆ ಎನ್ನುವುದು ದೃಶ್ಯ ಮಾಧ್ಯಮಗಳ ತಪ್ಪು ಗ್ರಹಿಕೆಯಾಗಿದೆ, ಮಾಧ್ಯಮಗಳಲ್ಲಿ ಪ್ರಸಾರವಾಗುವ ಸುಳ್ಳು ಸುದ್ಧಿಗಳನ್ನು ನಂಬುವ ಕೆಲವು ಅಧಿಕಾರಿಗಳು ಕೂಡ ಸರಕಾರ ಇರುವುದು ಡೌಟು ಎಂದು ತಿಳಿದು ತಾತ್ಸಾರದಿಂದ ಕೆಲಸ ಮಾಡುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ, ಇನ್ನು ಮೂರು ದಿನದಲ್ಲಿ ಐಎಎಸ್ ಅಧಿಕಾರಿಗಳ ತಂಡವೊಂದು ರಾಮನಗರ ಚನ್ನಪಟ್ಟಣ ನಗರಗಳಿಗೆ ಆಗಮಿಸಲಿದ್ದು, ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಪರಿಶೀಲನೆ ನಡೆಸಲಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

See also  ಕಾಡಾನೆ ಹಾವಳಿ ನಿಯಂತ್ರಣಕ್ಕೆ ಒತ್ತಾಯ: ಬಾಣಾವರದಲ್ಲಿ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು