News Kannada
Saturday, October 01 2022

ಕರ್ನಾಟಕ

ಕಾಸರಗೋಡಿನಲ್ಲಿ ಸಿಪಿಎಂ ಕಾರ್ಯಕರ್ತರ ಮೇಲೆ ಹಲ್ಲೆ - 1 min read

Photo Credit :

ಕಾಸರಗೋಡಿನಲ್ಲಿ ಸಿಪಿಎಂ ಕಾರ್ಯಕರ್ತರ ಮೇಲೆ ಹಲ್ಲೆ

ಕಾಸರಗೋಡು: ಸಿಪಿಎಂ ಕಾರ್ಯಕರ್ತರ ಮೇಲೆ ಬೈಕ್ ಗಳಲ್ಲಿ ಬಂದ ತಂಡವು ಹಲ್ಲೆ ನಡೆಸಿದ ಘಟನೆ ಆದಿತ್ಯವಾರ ರಾತ್ರಿ ಮಂಜೇಶ್ವರ ಸಮೀಪದ ಪಾವೂರು ಪೊಯ್ಯೆ ಯಲ್ಲಿ ನಡೆದಿದೆ.

ಹಲ್ಲೆಯಿಂದ ಸಿಪಿಎಂ ಮಂಜೇಶ್ವರ ವಲಯ ಕಾರ್ಯದರ್ಶಿ ಡಿ . ಬೂಬ ಸೇರಿದಂತೆ ಹತ್ತು ಮಂದಿ ಗಾಯಗೊಂಡಿದ್ದಾರೆ ಡಿ ಬೂಬ, ಅವರ ಪತ್ನಿ ಹರಿಣಾಕ್ಷಿ , ಸಿಪಿಎಂ ವರ್ಕಾಡಿ ಸ್ಥಳೀಯ ಸಮಿತಿಯ ಕಾರ್ಯದರ್ಶಿ ನವೀನ್ ಕುಮಾರ್ ಟಿ. ಸದಸ್ಯ ಮಹೇಶ್ ಟಿ. ಹಾಗೂ ಕಾರ್ಯಕರ್ತರಾದ ಅಕ್ಷಯ್ ಕುಮಾರ್ , ದೀಕ್ಷಿತ್ , ನಿತಿನ್ ಮತ್ತು ಚರಣ್ ರಾಜ್ ರನ್ನು ಕುಂಬಳೆಯಲ್ಲಿರುವ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಯ್ಯೆಯಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಹೊರ ಬರುತ್ತಿದ್ದಾಗ ಬೈಕ್ ಗಳಲ್ಲಿ ಬಂದ ತಂಡವು ಹಲ್ಲೆ ನಡೆಸಿದೆ.

ಹಲ್ಲೆ ನಡೆಸಿದವರು ಸಂಘ ಪರಿವಾರ ಕಾರ್ಯಕರ್ತರು ಎಂದು ಈ ಸಿಪಿಎಂ ಆರೋಪಿಸಿದೆ. ಘಟನಾ ಸ್ಥಳದಲ್ಲಿ ಮಂಜೇಶ್ವರ ಪೊಲೀಸರು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿದ್ದಾರೆ.

ಕೃತ್ಯವನ್ನು ಖಂಡಿಸಿ ಇಂದು ಸಂಜೆ ಮೂರು ಗಂಟೆಗೆ ಮಜಿಬೈಲ್ ನಲ್ಲಿ ಸಿಪಿಎಂ ಪ್ರತಿಭಟನಾ ಸಮಾವೇಶ ಆಯೋಜಿಸಿದೆ

See also  ನಾಲೆಯಿಂದ ಸೋರಿಕೆಯಾಗುತ್ತಿರುವ ನೀರು: ಕಾಮನಹಳ್ಳಿ ರೈತರ ಪರದಾಟ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು