News Kannada
Wednesday, September 28 2022

ಕರ್ನಾಟಕ

ಮಡಿಕೇರಿ ಕೋಟೆ ಉಸ್ತುವಾರಿಗೆ ಸಮಿತಿ - 1 min read

Photo Credit :

ಮಡಿಕೇರಿ ಕೋಟೆ ಉಸ್ತುವಾರಿಗೆ ಸಮಿತಿ

ಮಡಿಕೇರಿ: ಐತಿಹಾಸಿಕ ಮಡಿಕೇರಿ ಕೋಟೆ ನಿರ್ವಹಣೆಗೆ ಸಾರ್ವಜನಿಕ ಸಮಿತಿಯೊಂದನ್ನು ರಚಿಸುವ ಭರವಸೆಯನ್ನು ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ಮುಖ್ಯಸ್ಥೆ ಮೂರ್ತೇಶ್ವರಿ ನೀಡಿದ್ದಾರೆ.

ಗ್ರೀನ್ ಸಿಟಿ ಫೋರಂ ಸ್ಥಾಪಕಾಧ್ಯಕ್ಷ ಚೈಯ್ಯಂಡ ಸತ್ಯ ಬೆಂಗಳೂರು ಕಚೇರಿಯಲ್ಲಿ ಭೇಟಿ ಮಾಡಿ, ಮಡಿಕೇರಿ ಕೋಟೆ ಸಂರಕ್ಷಣೆ ಮತ್ತು ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳುವ ಅಗತ್ಯತೆ ಬಗ್ಗೆ ಗಮನ ಸೆಳೆದಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕ ಪ್ರಮುಖರನ್ನೊಳಗೊಂಡ ಸಮಿತಿಯನ್ನು ರಚಿಸುವುದರ ಮೂಲಕ ಕೋಟೆ ಸಂರಕ್ಷಣೆ ಮತ್ತು ನಿರ್ವಹಣೆ ಕಾರ್ಯ ಸಮರ್ಪಕವಾಗಿ ನಡೆಯುವಂತೆ ಮಾಡುವ ಭರವಸೆ ನೀಡಿದ್ದಾರೆ.

ಕೇಂದ್ರ ಸರ್ಕಾರದ ಸ್ವಚ್ಛತಾ ಪಕ್ವಾಡ ಅಭಿಯಾನದಡಿ ಗ್ರೀನ್ ಸಿಟಿ ಫೋರಂ ವಿವಿಧ ಸಂಘ, ಸಂಸ್ಥೆಗಳು, ವಿದ್ಯಾರ್ಥಿಗಳು, ಪೊಲೀಸರ ಸಹಕಾರದಲ್ಲಿ ಸತತ 12 ದಿನ ಮಡಿಕೇರಿ ಕೋಟೆ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿರುವ ಮಾಹಿತಿ ನೀಡಿದರು. ಈ ಸಂಬಂಧ ಹಲವು ಮಹತ್ವದ ವಿಷಯಗಳ ಕುರಿತು ಸತ್ಯ ಗಮನ ಸೆಳೆದರು. ಗ್ರೀನ್ ಸಿಟಿ ಫೋರಂ ಮುಂದಾಳತ್ವದಲ್ಲಿ ನಡೆದ ಸ್ವಚ್ಛತಾ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಬ್ಬ ಸಿಬ್ಬಂದಿಯನ್ನು ತಕ್ಷಣ ಮಡಿಕೇರಿಗೆ ನಿಯೋಜಿಸುವ ಭರವಸೆ ನೀಡಿದರು. ಅಲ್ಲದೇ, ಮುಂದಿನ ವಾರ ಮಡಿಕೇರಿಗೆ ಖುದ್ದು ಆಗಮಿಸಿ ಗ್ರೀನ್ ಸಿಟಿ ಫೋರಂ ಪದಾಧಿಕಾರಿಗಳೊಂದಿಗೆ ಸಮಲೋಚನೆ ನಡೆಸುವ ಇಂಗಿತವನ್ನು ಮೂರ್ತೇಶ್ವರಿ ವ್ಯಕ್ತ ಪಡಿಸಿದ್ದಾರೆಂದು ಚೈಯ್ಯಂಡ ಸತ್ಯ ಮಾಹಿತಿ ನೀಡಿದ್ದಾರೆ.

See also  ಮಂತ್ರಿ ಮಂಡಲ ರಚನೆಯಲ್ಲಿ ನಾನಿಲ್ಲ ಅಂದರೂ ಯಡಿಯೂರಪ್ಪ ಮನೆಗೆ ಆಕಾಂಕ್ಷಿಗಳ ಭೇಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು