ಕಾಸರಗೋಡು: ಕೇರಳ ಮರೈನ್ ಫಿಶರೀಸ್ ಕಾಯ್ದೆಯನ್ನು ಉಲ್ಲಂಘಿಸಿ ಮೀನುಗಾರಿಕೆ ನಡೆಸುತ್ತಿದ್ದ ಕರ್ನಾಟಕ ನೋಂದಾವಣೆಯ ಐದು ಮೀನುಗಾರಿಕಾ ಬೋಟ್ ಗಳನ್ನು ಮಂಜೇಶ್ವರ ಹೊಸಬೆಟ್ಟು ಮತ್ತು ಆಯಿತ್ತಲದಿಂದ ಮೀನುಗಾರಿಕಾ ಇಲಾಖೆ ಕರಾವಳಿ ಪೊಲೀಸರ ನೆರವಿನಿಂದ ವಶಕ್ಕೆ ತೆಗೆದುಕೊಂಡಿದೆ.
ಮಂಜೇಶ್ವರ ಹೊಸಬೆಟ್ಟುನಿಂದ ವಶಪಡಿಸಿಕೊಂಡ ಬೋಟ್ ಗಳಲ್ಲಿ ಲಭಿಸಿದ ಮೀನನ್ನು ಏಲಂ ಮಾಡಿ 7೦ ಸಾವಿರ ರೂ. ಲಭಿಸಿದ್ದು, ಬೋಟ್ ವೊಂದಕ್ಕೆ ತಲಾ 2.50 ಲಕ್ಷ ರೂ. ನಂತೆ ಹತ್ತು ಲಕ್ಷ ರೂ. ದಂಡ ವಿಧಿಸಲಾಗಿದೆ.
ಆಯಿತ್ತಲದಿಂದ ಕರಾವಳಿ ಪೊಲೀಸರು ಕರ್ನಾಟಕ ನೋಂದಾವಣೆಯ ಒಂದು ಬೋಟ್ ನ್ನು ವಶಪಡಿಸಿಕೊಂಡು ಮೀನುಗಾರಿಕಾ ಇಲಾಖೆಗೆ ಹಸ್ತಾಂತರಿಸಿದೆ. 2.5 ಲಕ್ಷ ರೂ. ದಂಡ ವಿಧಿಸಲಾಗಿದೆ. ಮೀನು ಏಲಂನಿಂದ 62 ಸಾವಿರ ರೂ. ಲಭಿಸಿದೆ.
ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಮೀನುಗಾರಿಕಾ ಇಲಾಖಾ ಉಪ ನಿರ್ದೇಶಕ ಕೆ. ಅಜಿತ್ ತಿಳಿಸಿದ್ದಾರೆ.