ಕಾಸರಗೋಡು: ಸಮುದ್ರಕ್ಕೆ ಸ್ನಾನಕ್ಕಿಳಿದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಜೇಶ್ವರ ಕಣ್ವತೀರ್ಥದಲ್ಲಿ ನಡೆದಿದೆ.
ಮೃತನನ್ನು ಮಂಜೇಶ್ವರ ದ ಇರ್ಫಾನ್ (13) ಎಂದು ಗುರುತಿಸಲಾಗಿದೆ.
ಸಹೋದರ ಮತ್ತು ಸ್ನೇಹಿತನ ಜೊತೆ ಸ್ನಾನಕ್ಕಿಳಿದ ಸಂದರ್ಭದಲ್ಲಿ ಸಮುದ್ರ ಪಾಲಾಗಿದ್ದು, ಜೊತೆಗಿದ್ದವರು ಮನೆಯವರಿಗೆ ನೀಡಿದ ಮಾಹಿತಿಯಂತೆ ಶೋಧ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಲಾಯಿತು.
ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.