News Kannada
Tuesday, November 29 2022

ಕರ್ನಾಟಕ

ಅಕ್ಸಿಸ್ ಬ್ಯಾಂಕ್‍ನಿಂದ ಸಾಲ ಪಡೆದ ರೈತರಿಗೆ ಅರೆಸ್ಟ್ ವಾರೆಂಟ್ - 1 min read

Photo Credit :

ಅಕ್ಸಿಸ್ ಬ್ಯಾಂಕ್‍ನಿಂದ ಸಾಲ ಪಡೆದ ರೈತರಿಗೆ ಅರೆಸ್ಟ್ ವಾರೆಂಟ್

ಚಾಮರಾಜನಗರ: ಕರ್ನಾಟಕದಲ್ಲಿರುವ ಆಕ್ಸಿಸ್ ಬ್ಯಾಂಕ್‍ನಲ್ಲಿ ಸಾಲಮಾಡಿದ ರೈತರಿಗೆ ಹಣ ಕಟ್ಟದಕ್ಕೆ ಕೊಲ್ಕತ್ತಾ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಅರೆಸ್ಟ್ ವಾರೆಂಟ್ ಕಳುಹಿಸಿರುವ ಬ್ಯಾಂಕ್‍ನ ಕ್ರಮ ಖಂಡಿಸಿ ಅನ್ನದಾತರು ನಗರದಲ್ಲಿ ಅಕ್ಸಿಸ್ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲೆಯ ಕೆಲವು ರೈತರು ಬೆಳೆ ಹಾಗೂ ಯಂತ್ರೋಪರಣಗಳಿಗೆ ಆರ್ಥಿಕವಾಗಿ ನೆರವು ಪಡೆಯಲು ನಗರದಲ್ಲಿರುವ ಆಕ್ಸಿಸ್ ಬ್ಯಾಂಕ್‍ನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಸಾಲ ಪಡೆದಿದ್ದರು. ಬ್ಯಾಂಕ್‍ನಲ್ಲಿ ಸಾಲ ಪಡೆಯುವಾಗ ರೈತರು ಬ್ಯಾಂಕ್ ಆಡಳಿತ ಮಂಡಳಿಗೆ ಸಹಿ ಮಾಡಿದ ಖಾಲಿ ಚೆಕ್ ನೀಡಿದ್ದರು. ಆದರೆ ಅದನ್ನೇ ಬಂಡವಾಳ ಮಾಡಿಕೊಂಡ ಅಕ್ಸಿಸ್ ಬ್ಯಾಂಕ್‍ನವರು ಸಾಲ ಮರು ಪಾವತಿ ಮಾಡದ ರೈತರು ಬ್ಯಾಂಕ್‍ಗೆ ಕೊಟ್ಟಿದ್ದ ಖಾಲಿ ಚೆಕ್‍ಗಳನ್ನು ನಗದೀಕರಣಕ್ಕೆ ಹಾಕಿ ಅದು ಬೌನ್ಸ್ ಆಗಿತ್ತು. ಇದರ ಪ್ರಯೋಜನ ಪಡೆಯಲು ಹೊರಟ ಬ್ಯಾಂಕ್‍ನವರು ಪಶ್ಚಿಮ ಬಂಗಾಲ ರಾಜ್ಯದ ಕೊಲ್ಕತ ನ್ಯಾಯಾಲಯದಲ್ಲಿ ಚೆಕ್‍ಬೌನ್ಸ್ ಪ್ರಕರಣ ದಾಖಲು ಮಾಡಿ ರೈತರಿಗೆ ಅರೆಸ್ಟ್ ವಾರೆಂಟ್ ನೀಡುವಂತೆ ಮಾಡಿದ್ದಾರೆ.

ಒಂದು ಕಡೆ ರಾಜ್ಯ ಸರ್ಕಾರವು ರೈತರು ಸಹಕಾರ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ಮಾಡಿದ್ದ ಕೃಷಿ ಸಾಲವನ್ನು ಮನ್ನಾ ಮಾಡಲು ನಿರ್ಧಾರ ಕೈಗೊಂಡು, ಬ್ಯಾಂಕ್‍ಗೆ ಹಣ ಪಾವತಿ ಮಾಡಲು ಮುಂದಾಗುತ್ತಿದ್ದಂತೆ ಕೆಲವು ಬ್ಯಾಂಕ್‍ನವರು ಹೊರ ರಾಜ್ಯದಲ್ಲಿ ಸಾಲ ಮರು ಪಾವತಿ ಮತ್ತು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿ ಮಾನಸಿಕ ಕಿರುಕುಳ ಮತ್ತು ಬಂಧನದ ಭೀತಿ ಮೂಡಿಸುತ್ತಿದ್ದು, ಇದರಿಂದ ಅನ್ನದಾತರು ಕಂಗಾಲಾಗಿ ತಲೆ ಮರೆಸಿಕೊಂಡು ಓಡಾಡುವ ಪರಿಸ್ಥಿತಿ ಬಂದೊದಗಿದೆ.

ಸಾಲಮನ್ನಾ ನೆಪದಲ್ಲಿ ರಾಜ್ಯ ಸರ್ಕಾರವು ರೈತರ ಜೀವನದಲ್ಲಿ ಚೆಲ್ಲಾಟವಾಡುತ್ತಿದ್ದು, ಸರ್ಕಾರದ ಯೋಜನೆಗೆ ಬ್ಯಾಂಕ್‍ನವರು ಸ್ಪಂದನೆ ಮಾಡದೇ ಇರುವುದು ಇದರಿಂದ ಸ್ಪಷ್ಟವಾಗುತ್ತಿದೆ. ಒಟ್ಟಿನಲ್ಲಿ ಆಡಳಿತ ನಡೆಸುವ ಸರ್ಕಾರಗಳು ರೈತರ ನೋವಿಗೆ ಸ್ಪಂದಿಸಲು ಮೀನಾಮೇಷ ಎಣಿಸುತ್ತಿರುವುದು ಕಂಡು ಬಂದಿದೆ.

ಪ್ರತಿಭಟನೆ ನಡೆಸಿರುವ ರೈತರು ಅಕ್ಸಿಸ್ ಬ್ಯಾಂಕ್ ಮ್ಯಾನೇಜರ್‍ರವರನ್ನು ಬಂಧಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಪೊಲೀಸರು ಬಂಧಿಸಿ ಕರೆದೊಯ್ದರು.

 

See also  ಬೆರಳ ತುದಿಯಲ್ಲೇ ಉತ್ತರ ಕನ್ನಡ ಪ್ರವಾಸಿ ಸ್ಥಳಗಳ ಮಾಹಿತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು