ಕಾರವಾರ: ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಸಮುದ್ರಯದಲ್ಲಿ ಗುರುವಾರ ಸಂಭವಿಸಿದೆ.
ಅಂಕೋಲಾ ಜಮಗೋಡಿನ ಪ್ರಮೋದ ನಾಯಕ(51) ಹಾಗೂ ಅಮೋಘ ನಾಯಕ(25) ಮೃತ ದುರ್ದೈವಿಗಳು. ಸಮುದ್ರದಲ್ಲಿ ಮುಳುಗುತ್ತಿದ್ದ ಸಂಪತ್ ಹಾಗೂ ಸಂಗಮ್ ಎಂಬ ಇಬ್ಬರನ್ನು ರಕ್ಸಿಸಲಾಗಿದ್ದು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಗೋಕರ್ಣ ಪ್ರವಾಸಕ್ಕೆಂದು ಕುಟುಂಬದವರೊಡನೆ ಆಗಮಿಸಿದ್ದು ಸಮುದ್ರಕ್ಕೆ ಈಜಲು ತೆರಳಿದ ವೇಳೆ ಈ ದುರಂತ ಸಂಭವಿಸಿದೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.