ಹಾಸನ: ಜಿಲ್ಲಾಧಿಕಾರಿ ಕಚೇರಿ ಎದುರು ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬಳು ಅರೆಬೆತ್ತಲೆ ಪ್ರತಿಭಟನೆ ನಡೆಸಿ ತನಗೆ ನಂಬಿಸಿ ವಂಚಿಸಿದ ಪುರುಷರ ವಿರುದ್ಧ ಅಕ್ರೋಶವನ್ನು ವ್ಯಕ್ತಪಡಿಸಿದ ಘಟನೆ ನಡೆದಿದೆ.
ಅದಲ್ಲದೆ ಮಹಿಳೆಯು ಬಸ್ ವೈಪರ್ ಬಿಚ್ಚಿ ಮೂರು ಕೆಎಸ್ ಆರ್ ಟಿಸಿ ಬಸ್ ಗಾಜು ಪುಡಿ ಮಾಡಿ ಜನರ ಮೇಲೆ ಕಲ್ಲು ತೂರಾಟವನ್ನು ನಡೆಸಿದ್ದಾಳೆ.
ಸಿಎಂ ಕುಮಾರಸ್ವಾಮಿ ಅವರು ನ್ಯಾಯ ಕೊಡಿಸಬೇಕೆಂದು ಮನವಿಯನ್ನು ಮಾಡಿದರು. ಹರಸಾಹಸ ಪಟ್ಟು ಪೊಲೀಸರು ಮಹಿಳೆಯ ಮನವೊಲಿಸಿ ಠಾಣೆಗೆ ಕರೆದೊಯ್ದಿದ್ದಾರೆ.
ಮಹಿಳೆಯ ಮಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ನಾಲ್ವರು ಪುರುಷರ ವಿರುದ್ಧ ಮಹಿಳೆ ಆರೋಪ ಮಾಡುತ್ತಿದ್ದಾರೆ.