News Kannada
Friday, December 09 2022

ಕರ್ನಾಟಕ

ಅಪರ ಜಿಲ್ಲಾಧಿಕಾರಿ ಅವಮಾನಿಸಿದ ಬಿಜೆಪಿ ಮಾಜಿ ಶಾಸಕ

Photo Credit :

ಅಪರ ಜಿಲ್ಲಾಧಿಕಾರಿ ಅವಮಾನಿಸಿದ ಬಿಜೆಪಿ ಮಾಜಿ ಶಾಸಕ

ಕಾರವಾರ: ಜನ ಸಾಮಾನ್ಯರು ಇರುವುದರಿಂದಲೇ ಪೊಲೀಸರು ಹಾಗೂ ನೀವೆಲ್ಲ ಇದ್ದೀರಿ. ಜನರಿಲ್ಲವಾದರೇ ನೀವೆಲ್ಲ ಭಿಕ್ಷೆ ಬೇಡಿಕೊಂಡಿರಬೇಕಿತ್ತು ಎಂದು ಬಿಜೆಪಿ ಮುಖಂಡ ಹಾಗೂ ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ ಉತ್ತರ ಕನ್ನಡ ಜಿಲ್ಲೆ ಅಪರ ಜಿಲ್ಲಾಧಿಕಾರಿ ಅವರನ್ನು ಅವಮಾನಿಸಿದ್ದಾರೆ.

ರಾಜ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರನ್ನು ಕಡೆಗಣಿಸಿದ್ದಲ್ಲದೇ, ರೈತ ಮಹಿಳೆಯನ್ನು ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರವಾರ ನಗರ ಘಟಕದಿಂದ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅವರ ಮನವಿ ಸ್ವೀಕರಿಸಲು ಆಗಮಿಸಿದ ಅಪರ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್ ಅವರಿಗೆ ಸುನೀಲ್ ಹೆಗಡೆ ಈ ರೀತಿಯಾಗಿ ನಿಂದಿಸಿರುವ ಘಟನೆ ನಡೆಯಿತು.

ಈ ಹೇಳಿಕೆಯು ಅಪರ ಜಿಲ್ಲಾಧಿಕಾರಿಯವರಿಗೆ ಬೇಸರದ ಜೊತೆಗೆ ಮುಜುಗರ ಉಂಟು ಮಾಡಿದ್ದು, ನೀವು ಈ ರೀತಿಯಾಗಿ ಹೇಳಬಾರದು ಎಂದು ಅಪರ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್ ಅಸಮಾದಾನ ವ್ಯಕ್ತಪಡಿಸಿ, ಮನವಿ ಸ್ವೀಕರಿಸಿ ಮರಳಿದರು.

See also  ಕಾಸರಗೋಡಿನಲ್ಲಿ ಭಾರೀ ಮಳೆಗೆ ಅಪಾರ ಹಾನಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು