News Kannada
Friday, December 09 2022

ಕರ್ನಾಟಕ

ಡೆತ್ ನೋಟ್ ಬರೆದಿಟ್ಟು ಪ್ರೇಮಿಮಗಳಿಬ್ಬರು ಆತ್ಮಹತ್ಯೆ

Photo Credit :

ಡೆತ್ ನೋಟ್ ಬರೆದಿಟ್ಟು ಪ್ರೇಮಿಮಗಳಿಬ್ಬರು ಆತ್ಮಹತ್ಯೆ

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನಲ್ಲಿ ಬರುವ ಬೆಟ್ಟದ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ದಾಖಲಾಗಿದೆ.

ಬೆಟ್ಟದಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವೀಣಾ ಡಿಎಲ್ ಎಂಬಾಕೆಯು ಇಂದು ಮುಂಜಾನೆ ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಮನೆಯಲ್ಲಿ ಹೇಳಿ ತನ್ನ ಪ್ರಿಯಕರ ಸ್ವಾಮಿ ಎಂಬ ಯುವಕರೊಂದಿಗೆ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ಕೊಳದ ಹತ್ತಿರ ಒಂದೇ ಬಟ್ಟೆಯಲ್ಲಿ ಒಂದೇ ಮರಕ್ಕೆ ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುಮಾರು ಎರಡು ವರ್ಷಗಳಿಂದ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದು ಮನೆಯವರೊಂದಿಗೆ ಹೇಳಿಕೊಳ್ಳಲಾಗದೆ ಹೆದರಿ ಈ ರೀತಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸಾಯುವ ಮುನ್ನ ಯುವತಿಯು ಡೆತ್ ನೋಟ್ ನಲ್ಲಿ ನಮ್ಮ ಸಾವಿಗೆ ಯಾರೂ ಕಾರಣರಲ್ಲ ನಮ್ಮಿಬ್ಬರ ಮೃತದೇಹವನ್ನು ಒಂದೇ ಕಡೆ ಸಂಸ್ಕಾರ ಮಾಡಬೇಕೆಂದು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವತಿಯ ವಯಸ್ಸು ಅಂದಾಜು 17 ವೀಣಾ     ಎಂಬ ಕೆಯು ದೊಡ್ಡೇಗೌಡನ ಕೊಪ್ಪಲು ಗ್ರಾಮದವಳಗಿರುತ್ತಾಳೆ ಹುಡುಗನ ವಯಸ್ಸು ಸುಮಾರ್ 22 ಕೆಳಗಿನ ಕೊಪ್ಪಲು ನಿವಾಸಿ ಯಾಗಿರುತ್ತಾನೆ.

ಪ್ರಕರಣ ಬೆಟ್ಟದಪುರ ಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಎರಡು ಕುಟುಂಬದವರು ಯಾವುದೇ ರೀತಿ ಕೇಸು ಅಥವಾ ದೂರು ಬೇಡವೆಂದು ಮನವಿ ಸಲ್ಲಿಸಿದ ಮೇರೆಗೆ ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ವಾರಸುದಾರರಿಗೆ. ನೀಡಲಾಗುವುದು ಎಂದು ಠಾಣಾಧಿಕಾರಿ ಲೋಕೇಶ್ ಅವರು ತಿಳಿಸಿದ್ದಾರೆ.

See also  ಪ್ರಗತಿ ಪರಿಶೀಲನಾ ಸಭೆ: ಅಧಿಕಾರಿಗಳ ವಿರುದ್ಧ ಸಚಿವ ದೇಶಪಾಂಡೆ ಅಸಮಾಧಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು