ಕಾರವಾರ: ಸೋದೆ ಅರಸರ ಅವಧಿಯ ಪುರಾಣ ಪ್ರಸಿದ್ಧ ಹುಲಿದೇವರ ವಿಗ್ರಹ ಕಳ್ಳತನವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು ಬಿಸಲಕೊಪ್ಪ ಗ್ರಾಮದಲ್ಲಿ ಸಂಭವಿಸಿದೆ.
ಈ ಬಗ್ಗೆ ಶಿರಸಿ ಗ್ರಾಮೀಣ ಠಾಣೆ ವ್ಯಾಪ್ತಿಯ ಬಿಸಿಲಕೊಪ್ಪ ಗ್ರಾಮ ರಸ್ತೆ ಪಕ್ಕದಲ್ಲಿದ್ದ ವಿಗ್ರಹ ಪ್ರತಿವರ್ಷ ದೀಪಾವಳಿ ಸಂದರ್ಭದಲ್ಲಿ ಊರ ಜನ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಸೋದೆ ರಾಜರ ಕಾಲದ ವಿಗ್ರಹವಾಗಿದ್ದು ಹುಲಿದೇವರಕಟ್ಟೆ ಎಂದೆ ಪ್ರಸಿದ್ದಿ ಹೊಂದಿದ್ದ ಸ್ಥಳ ಇದಾಗಿದ್ದು ಜನರ ಶ್ರದ್ಧಾ ಭಕ್ತಿಯ ಕೇಂದ್ರ ವಾಗಿತ್ತು. ಗ್ರಾಮದಲ್ಲಿ ಜಾನುವಾರುಗಳಿಗೆ ಕಾಯಿಲೆ ಅಥವಾಇತರ ತೊಂದರೆ ಕಂಡು ಬಂದಾಗ ಈ ದೇವರಿಗೆ ಹರಕೆ ಹೊತ್ತು ಪೂಜೆ ನಡೆಸಲಾಗುತ್ತದೆ. ಶಿರಸಿ ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.